ಇನ್ಶೂರೆನ್ಸ್​ ಹಣಕ್ಕಾಗಿ ಸಲಿಂಗಕಾಮಿ ಪತಿಯಿಂದಲೇ ಕೊಲೆಯಾದಳಾ ಪತ್ನಿ?

ಲಂಡನ್​: ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಭಾರತೀಯ ಮೂಲದ ಮಹಿಳೆ ಜೆಸ್ಸಿಕಾ ಪಟೇಲ್ ಕೊಲೆ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆಕೆಯ ಪತಿ ಮಿಥೇಶ್​ ಪಟೇಲ್ ಕೊಲೆಗಾರ ಎಂಬ ಸತ್ಯ ತನಿಖೆಯಿಂದ ಬೆಳಕಿಗೆ ಬಂದಿದೆ. 37 ವರ್ಷದ ಮಿಥೇಶ್​ ಪಟೇಲ್​ ಒಬ್ಬ ಸಲಿಂಗಕಾಮಿಯಾಗಿದ್ದು, ಆತನಿಗೆ ಡೇಟಿಂಗ್​ ಆ್ಯಪ್​ವೊಂದರಲ್ಲಿ ಪರಿಚಯವಾದ ಗೆಳೆಯನ ಜೊತೆ ಹೊಸ ಜೀವನ ನಡೆಸಲು ಬಯಸಿ, ಜೆಸ್ಸಿಕಾಳನ್ನು ಸೂಪರ್​ರ್ಮಾರ್ಕೆಟ್ ಪ್ಲಾಸ್ಟಿಕ್ ಚೀಲ ಬಳಸಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಜೆಸ್ಸಿಕಾಳನ್ನ ಕೊಂದು ಆಕೆ ಹೆಸರಲ್ಲಿ ಸಿಗುವ 2 ಮಿಲಿಯನ್​ ​ಫೌಂಡ್​ ಇನ್ಸೂರೆನ್ಸ್​ ಹಣ ದೋಚಿ,ಸಲಿಂಗಿ ಗೆಳೆಯನ ಜೊತೆ ಆಸ್ಟ್ರೇಲಿಯಾಗೆ ಹಾರಲು ಮಿಥೇಶ್ ಪ್ಲಾನ್ ರೂಪಿಸಿದ್ನಂತೆ. ಪ್ರಕರಣ ವಿಚಾರಣೆ ನಡೆಸಿದ ಟಿಸೈಡ್​ ಕ್ರೌನ್​ ಕೋರ್ಟ್​​, ಆರೋಪಿ ಮಿಥೇಶ್​ ಪಟೇಲ್​ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.