ಅಯ್ಯಯ್ಯಮ್ಮೋ! ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲಮ್ಮೋ..

ಚಿಕ್ಕಮಗಳೂರು: ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ.. ಶಾಸಕ ಎಂ.ಪಿ. ಕುಮಾರಸ್ವಾಮಿ ಅಂತಾ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ತಮ್ಮನ್ನು ತಾವು ಪರಿಚಯ ಮಾಡಿಕೊಂಡಿರುವ ಪ್ರಸಂಗ ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.
ಬಜೆಟ್​ನಲ್ಲಿ ಅನ್ನಭಾಗ್ಯದ ಅಕ್ಕಿ‌ಯಲ್ಲಿ ಕಡಿತಗೊಳಿಸಿದ್ದಾರೆ ಅಂತಾ ಆರೋಪಿಸಿ ಪಟ್ಟಣದ ನಡು ರಸ್ತೆಯಲ್ಲಿ ಸುಬ್ಬಮ್ಮ ಎನ್ನುವವರು ಶಾಸಕರಿಗೆ ತರಾಟೆ ತಗೆದುಕೊಡಿದ್ದಾರೆ. ನೀವೂ, ಹಿಂದೆ ಬಡವರಾಗಿದ್ರಿ ಎಂಬುದನ್ನು‌ ಮರೆಯಬೇಡಿ, ಹೀಗಾದ್ರೆ ಮಕ್ಕಳನ್ನು ಹೇಗೆ ಸಾಕುವುದು? ಎಂದು ಸುಬ್ಬಮ್ಮ, ಶಾಸಕರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಶಾಸಕರು, ನಾನು ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ, ಶಾಸಕ ಎಂ.ಪಿ. ಕುಮಾರಸ್ವಾಮಿ ಅಂತಾ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡ್ತೇನೆ ಅಂತಾ ಮಹಿಳೆಯನ್ನು ಸಮಾಧಾನ ಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv