ಮಾವ, ಸೊಸೆಯ ಕೊಲೆ, ಮಗ ನಾಪತ್ತೆ!

ತುಮಕೂರು: ಮಾವ ಹಾಗೂ ಸೊಸೆಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಕುಣಿಗಲ್​​ ತಾಲೂಕಿನ ಕಾಂತಯ್ಯನಪಾಳ್ಯದಲ್ಲಿ ತಡರಾತ್ರಿ ನಡೆದಿದೆ.
ಈರಣ್ಣ(65) ಹಾಗೂ ಸೊಸೆ ಸೌಮ್ಯ(23) ಕೊಲೆಯಾದವರು. ಘಟನೆ ಬಳಿಕ ಈರಣ್ಣ ಅವರ ಮಗ ನಾರಾಯಣ ಇಂದು ಬೆಳಗ್ಗೆ ನಾಪತ್ತೆಯಾಗಿದ್ದಾನೆ. ಜಮೀನಿನ ವಿಚಾರಕ್ಕಾಗಿ ನಾರಾಯಣ​​ನೇ ತನ್ನ ತಂದೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈರಣ್ಣ ಅವರ ಕೊಲೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕುಣಿಗಲ್​​ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಈರಣ್ಣ ಮೃತದೇಹದ ಪಕ್ಕದಲ್ಲಿ ಸೊಸೆ ಸೌಮ್ಯಳ ಶವವೂ ಪತ್ತೆಯಾಗಿದೆ. ಕುಣಿಗಲ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.