ಮನೆ ನಾಯಿ ಎಂದು ಮೌಂಟೇನ್ ಲಯನ್ ಅಪ್ಪಿಕೊಂಡಳು..! ಮುಂದೆನಾಯ್ತು..?

ಪ್ರೀತಿಯಿಂದ ಸಾಕಿದ ನಾಯಿ ಅಂತಾ ಸಿಂಹವನ್ನ ಮಹಿಳೆ ಒಬ್ಬರು ಅಪ್ಪಿಕೊಂಡು ಸುದ್ದಿಯಾಗಿದ್ದಾರೆ. ಪ್ರೀತಿಯಿಂದ ನಾಯಿಗಳನ್ನ, ಬೆಕ್ಕುಗಳನ್ನ ಎತ್ತಿ ಮುದ್ದಾಡ್ತೇವೆ. ಕ್ರೂರ ಪ್ರಾಣಿಗಳನ್ನ ಕಣ್ಣಾರೆ ನೋಡ್ಬೇಕು ಅಂದ್ರನೇ ಭಯ. ಅವುಗಳ ಹತ್ತಿರ ಹೋಗೋದಿರಲಿ, ಹೆಸರು ಕೇಳಿದ್ರೆ ಕೆಲವರು ಬೆಚ್ಚಿ ಬೀಳೋರೂ ಇದ್ದಾರೆ. ಅಂತದ್ರಲ್ಲಿ ಹುಲಿ, ಸಿಂಹಗಳನ್ನ ಅಪ್ಪಿಕೊಳ್ಳೋದು ಅಂದ್ರೆ ಸಾಮಾನ್ಯನಾ? ಅಮೆರಿಕಾದ ಇಡಾಹೋದಲ್ಲಿ ಮನೆಯ ನಾಯಿ ಎಂದು ಮೌಂಟೇನ್ ಲಯನ್​ ಅಪ್ಪಿಕೊಂಡು ಮೋಸ ಹೋಗಿದ್ದಾರೆ.

ಅಂದ್ಹಾಗೆ ಇಡಾಹೋದ ಸ್ಟ್ರೀಟ್​ಗೆ ಎಂಟ್ರಿ ನೀಡಿದ್ದ ಮೌಂಟೇನ್ ಲಯನ್, ನಾಯಿ ಮೇಲೆ ಅಟ್ಯಾಕ್ ಮಾಡಿದೆ. ಮನೆಯಲ್ಲಿಯೇ ಇದ್ದ ನಾಯಿಯ ಯಜಮಾನಿ ಹೊರಗೆ ಬಂದು ಯಾಕೆ ನಾಯಿ ಗಲಾಟೆ ಮಾಡ್ತಿದೆ ಅಂತಾ ಬಂತು ನೋಡಿದ್ದಾರೆ. ಈ ವೇಳೆ ಮೌಂಟೇನ್ ಲಯನ್ ಕೂಡ ತಮ್ಮ ಮನೆಯ ನಾಯಿಯಂತೆ ಕಾಣಿಸಿದೆ. ಯಾವುದೋ ಬೀದಿ ನಾಯಿ ಬಂದು ತಮ್ಮ ಮನೆಯ ನಾಯಿ ಜೊತೆ ಜಗಳಕ್ಕೆ ನಿಂತಿದೆ ಅಂತಾ ತಿಳಿದ ಅವರು, ಬಿಡಿಸಲು ಮುಂದಾಗಿದ್ದಾರೆ.

ಈ ವೇಳೆ ತಮ್ಮ ಮನೆಯ ನಾಯಿಯನ್ನ ಅಪ್ಪಿಕೊಳ್ಳುವ ಬದಲಾಗಿ, ಸಿಂಹವನ್ನ ಹೋಗಿ ಹಿಡಿದ್ದಾಳೆ. ಕೂಡಲೇ ಕ್ರೂರವಾಗಿ ವರ್ತಿಸಿದ ಸಿಂಹವನ್ನ ಕಂಡ ಆಕೆ ಜೋರಾಗಿ ಕಿರುಚಿಕೊಂಡು ಹೇಗೋ ಎಸ್ಕೇಪ್ ಆಗಿದ್ದಾರೆ. ಕೊನೆಗೆ ಆಕೆಯ ಗಂಡ ಗನ್ ತಂದು ಸಿಂಹವನ್ನ ಹೊಡೆದು ಸಾಯಿಸಿದ್ದಾರೆ. ಕೊನೆಗೆ ಇದು ಅಲ್ಲಿನ ಅಧಿಕಾರಿಗಳಿಗೆ ಗೊತ್ತಾಗಿದೆ. ಸ್ಥಳಕ್ಕೆ ಬಂದ ಇಡಾಹೋ ರಾಜ್ಯದ ಮೀನುಗಾರಿಕೆ ಮತ್ತು ಹಂಟಿಂಗ್​ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv