ಬಿಜೆಪಿ ಸೇರದೆ, ರಾಗಿಣಿ ಏನ್​ ಮಾಡ್ತಿದ್ದಾರೆ ಗೊತ್ತಾ..?

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ ಎಲೆಕ್ಷನ್​ಗೆ ಇನ್ನೇನು 2 ದಿನ ಅನ್ನೋ ಟೈಮ್​ನಲ್ಲಿ ಸಿಕ್ಕಾಪಟ್ಟೆ ಓಡಾಡ್ತಾ ಇತ್ತು. ಇದೇ ಟೈಮ್​ನಲ್ಲಿ ಫಸ್ಟ್ ನ್ಯೂಸ್​ ಜೊತೆಗೆ ನೀಡಿದ ಇಂಟರ್​ವ್ಯೂನಲ್ಲಿ ರಾಜಕೀಯಕ್ಕೆ ಬರ್ತೀರ ಆಂತ ಕೇಳಿದಕ್ಕೆ. ಹೇಳೋಕಾಗಲ್ಲ. ಬಂದರೂ ಬರಬಹುದು ಅಂತ ಮುಗುಳುನಕ್ಕಿದ್ರು ರಾಗಿಣಿ. ಅದಾಗ್ಲೆ ಅರವಿಂದ ಲಿಂಬಾವಳಿ ಅವ್ರ ಸಾರಥ್ಯದಲ್ಲಿ ರಾಗಿಣಿ ಬಿಜೆಪಿ ಸೇರ್ಪಡೆಗೆ ಸೇರಲು ವೇದಿಕೆ ಕೂಡ ಸಜ್ಜಾಗಿತ್ತು. ಆದ್ರೆ ಅದೇನಾಯ್ತೋ ಏನೋ ಈ ಸುದ್ದಿ ತಣ್ಣಗಾಗಿ, ಇದ್ರ ಬಗ್ಗೆ ಪ್ರತಿಕ್ರಿಯೇ ನೀಡದೇ ಸುಮ್ಮನ್ನಿದ್ದ ಜಿಂತಾತ ಹುಡುಗಿ ಅಬ್ಬ ಸಧ್ಯ ಬಚಾವಾದೆ ಅಂತ ಸುಮ್ಮನಾದ್ರು.
ಹಸಿರು ಡ್ರೆಸ್​​ಗೂ, ಪಾಲಿಟಿಕ್ಸ್​​ಗೂ ಇದ್ಯಾ ಲಿಂಕು..?
ಬಿಜೆಪಿ ಸೇರದೇ ರಾಗಿಣಿ ಏನ್ಮಾಡ್ತಾ ಇದ್ದಾರೆ ಅಂದು ಕೊಂಡಿರ್ತಾರೆ ಹಲವರು. ಆದ್ರೆ ರಾಗಿಣಿ ಎಂದಿನಂತೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಬ್ಯುಸಿ ಶೆಡ್ಯುಲ್​ನಲ್ಲಿ ಒಂದು ಚೆಂದದ ಅಷ್ಟೆ ಹಾಟ್​ ಆದ, ಬೇಸಿಗೆಗೆ ಸೂಟ್​ ಆಗೋ ಹಾಟ್​ ಸೂಟ್​ ತೊಟ್ಟು ಫೋಟೋಶೂಟ್​ ಮಾಡ್ಸಿದ್ದಾರೆ. ಅದೊಂದು ಕಡೆಯಾದ್ರೆ ರಾಗಿಣಿ ಗ್ರೀನ್​ ಕಲರ್​ ಡ್ರೆಸ್​​​​ ಧರಿಸಿರೋದು ನೋಡಿ, ರಾಗಿಣಿ ರೈತರ ಪರ.. ರಾಗಿಣಿ ರೈತರ ಪರ ಇರೋ ಪಕ್ಷವನ್ನೇ ಸೇರ್ತಾರೆ ಅಂತ ಹೊಸ ಗಾಸಿಪ್​ ಹುಟ್ಟುಹಾಕಿದ್ದಾರಂತೆ ರಾಗಿಣಿ ಸದಾ ಕಾಲದ ಕಟ್ಟಾ ಅಭಿಮಾನಿಗಳು.