ಚಳಿಗಾಲದಲ್ಲಿ ನಿಮ್ಮ ಕಣ್ಣುಗಳು ಜೋಪಾನ

ಚಳಿಗಾಲ ಬಂತು ಅಂದರೆ ಲೆಜಿನೆಸ್​ ಅನ್ನ ಹೊತ್ಕೊಂಡೇ ಬರುತ್ತೆ. ಬೆಳಗ್ಗೆ ಬೇಗ ಏಳೋಕೆ ಕಷ್ಟ.. ಈ ಚಳಿಯಿಂದ ಯಾವ ಕೆಲಸ ಮಾಡೋಕೆ ಮೂಡ್​ ಇರಲ್ಲ. ಆದರೆ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಏನೂ ಕಡಿಮೆ ಇರಲ್ಲ. ಜ್ವರ, ಕೆಮ್ಮು..ಹೀಗೆ ಒಂದರ ಹಿಂದೆ ಇಂದು ಕಾಯಿಲೆಗಳು ನಮ್ಮನ್ನ ಕಾಡ್ತಾ ಇರುತ್ತದೆ. ಇದೆಲ್ಲವನ್ನ ಹೊರತುಪಡಿಸಿ ಚಳಿಗಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಬಹಳ ಮುಖ್ಯ. ಹಾಗೆ ಕಣ್ಣಿನ ಕಾಳಜಿ ಕೂಡಾ ತುಂಬಾ ಅಗತ್ಯವಾಗಿರುತ್ತದೆ. ಯಾಕಂದ್ರೆ ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಇರಲ್ಲ, ಹೀಗಾಗಿ ನಮ್ಮ ಸ್ಕಿನ್​ ಮಾತ್ರ ಅಲ್ಲ ಕಣ್ಣುಗಳು ಕೂಡಾ ಡ್ರೈ ಆಗುತ್ತೆ. ಧೂಳು ಕಣ್ಣಿನ ಸಮಸ್ಯೆಯನ್ನ ತಂದೊಡುತ್ತದೆ.

ಚಳಿಗಾಲದಲ್ಲಿ ಕಣ್ಣುಗಳು ಡ್ರೈ ಆಗೋದು, ಇನ್​ಫೆಕ್ಷನ್​ ಆಗೋದು, ಕಣ್ಣುಗಳಲ್ಲಿ ನವೆ ಉಂಟಾಗೋದು ಕಾಮನ್​. ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು. ನೀವು ದಿನ ನಿತ್ಯ ಬೈಕ್​ ಓಡಿಸುವಾಗ ಬೇರೆ ನಿಮಗೆ ಆಗುವ ಅನುಭವಕ್ಕಿಂತ ಚಳಿಗಾಲದಲ್ಲಿ ನಿಮಗೆ ಸಿಗುವ ಅನುಭವ ಹೇಳತೀರದು. ಜೋರಾದ ಗಾಳಿ ನಿಮ್ಮ ಕಣ್ಣಿನ ಮೇಲೆ ಬೀಸುತ್ತಿದ್ರೆ, ನಿಮ್ಮ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಕಣ್ಣು ಡ್ರೈ ಆಗಿ ಕಿರಿಕಿರಿ ಉಂಟು ಮಾಡುತ್ತದೆ.

ಕಣ್ಣಿನ ಡ್ರೈನೆಸ್​ ಸಮಸ್ಯೆಗೆ ಪರಿಹಾರ ಏನು ಇಲ್ಲಿದೆ ನೋಡಿ

  1. ಬಿಸಿಲಿನಲ್ಲಿ ನೀವು ಸಮಯವನ್ನು ಕಳೆಯುತ್ತಿದ್ದರೆ, ನಿಮ್ಮ ಕಣ್ಣುಗಳು ಡ್ರೈ ಆಗುತ್ತದೆ. ಇಂತದ ಸಮಯದಲ್ಲಿ ಹೆಚ್ಚು ದ್ರವಾಹಾರಗಳನ್ನ ಸೇವಿಸಿ.
  2. ಚಳಿಗಾಲದಲ್ಲಿ ಬೆಚ್ಚಗಿರಲಿ ಎಂದು ಕೆಲವರು ಬ್ಲೋ ಹೀಟಿಂಗ್​ ಅನ್ನ ಬಳಸುತ್ತಾರೆ. ಇದನ್ನ ನೇರವಾಗಿ ನಿಮ್ಮ ಮುಖದ ಮೇಲೆ ಬಳಸೋದ್ರಿಂದ ನಿಮ್ಮ ಕಣ್ಣುಗಳು ಡ್ರೈ ಆಗುತ್ತದೆ. ಆದ್ದರಿಂದ ಆದಷ್ಟು ಬ್ಲೋ ಹೀಟಿಂಗ್​ ಬಳಸುವುದನ್ನ ಕಡಿಮೆ ಮಾಡಿ.
  3. ಬಿಸಿಲಿಗೆ ಹೋಗುವಾಗ ಸನ್​ಗ್ಲಾಸ್​ ಅಥವಾ ಹ್ಯಾಟ್​ಗಳನ್ನ ಬಳಸಿ
  4. ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ದೇಹ ಡಿ-ಹೈಡ್ರೇಟ್​ ಆಗುವುದನ್ನ ತಡೆಯುತ್ತದೆ. ಕಣ್ಣಿಗೂ ಕೂಡಾ ತೇವಾಂಶ ಒದಗಿಸುತ್ತದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv