ಕೊಹ್ಲಿ ಬಾಯ್ಸ್​ ಗೆಲುವಿನ ಹಿಂದಿದೆ ಆ 3 ಸೀಕ್ರೆಟ್..!

ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಟೀಮ್​ ಇಂಡಿಯಾ, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಈ ನಡುವೆ ತಂಡದ ಯಶಸ್ಸಿನ ಹಿಂದಿರುವ ರಹಸ್ಯವನ್ನ ಕ್ಯಾಪ್ಟನ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಹೌದು..ಇಂಡಿಯನ್​ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಟೆಸ್ಟ್​ ಸರಣಿ ಗೆಲುವಿನ ಹಿಂದಿದ್ದ 3 ರಹಸ್ಯಗಳನ್ನ ಹೊರ ಹಾಕಿದ್ದಾರೆ. ಸ್ವಯಂ ನಂಬಿಕೆ​, ಧೈರ್ಯ ಮತ್ತು ಫಿಟ್ನೆಸ್​ ನಮ್ಮ ಯಶಸ್ಸಿನ ಹಿಂದಿರುವ ಗುಟ್ಟು ಎಂದಿದ್ದಾರೆ. 2-1 ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿ ಗೆದ್ದ ವಿರಾಟ್​ ಪಡೆ, 71 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಈ ಹಿಂದೆ 11 ಬಾರಿ ಆಸಿಸ್​ ಪ್ರವಾಸ ಕೈಗೊಂಡಿದ್ದ ಭಾರತ, 2 ಬಾರಿ ಮಾತ್ರ ಸರಣಿ ಡ್ರಾ ಮಾಡಿಕೊಂಡಿದ್ದು ಇದುವರೆಗಿನ ಸಾಧನೆಯಾಗಿತ್ತು. ಆದ್ರೆ ಈ ಬಾರಿ ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಕಾಂಗರೂ ನಾಡಿಗೆ ತೆರಳಿದ್ದ ಭಾರತ, ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದು ದಾಖಲೆ ಬರೆಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv