ರೈತರ ಬಳಿ ಲಂಚ ಕೇಳಿದ್ರೆ ಸಸ್ಪೆಂಡ್ ಮಾಡ್ತೀನಿ: ಸಿಎಂ ಕುಮಾರಸ್ವಾಮಿ

ಮಂಡ್ಯ: ರೈತರ ಬಳಿ ಲಂಚ ಕೇಳಿದ್ರೆ ಅಂತಹವರನ್ನ ಮುಲಾಜಿಲ್ಲದೇ ಸಸ್ಪೆಂಡ್ ಮಾಡ್ತೀನಿ. ನನಗೆ ಲಂಚ ಕೇಳುವವರ ಹೆಸರು ಹೇಳಿ ಸಾಕು, ನಾನು ಸಸ್ಪೆಂಡ್ ಮಾಡ್ತೀನಿ ಎಂದು ಪ್ರಚಾರದ ವೇಳೆ ಲಂಚಬಾಕರಿಗೆ ಸಿಎಂ ಕುಮಾರಸ್ವಾಮಿ ವಾರ್ನಿಂಗ್ ಕೊಟ್ಟಿದ್ದಾರೆ.

ಕಲ್ಲು ಹೊಡೆಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಹುನ್ನಾರ ನಡೆದಿದೆ
ಜಿಲ್ಲೆಯ ಕೆಸ್ತೂರಿ ಗ್ರಾಮದಲ್ಲಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ವೇಳೆ  ಮಾತನಾಡಿದ ಕುಮಾರಸ್ವಾಮಿ,  ಕೆಲವರು ಸಂದೇಶ್ ಹೋಟೆಲ್‌ನಲ್ಲಿ ಕುಳಿತು ಕುತಂತ್ರ ಮಾಡ್ತಿದ್ದಾರೆ. ಮತದಾನ ಇನ್ನೆರಡು ಮೂರು ದಿನ ಇರುವಂತೆ ಕಲ್ಲು ಹೊಡೆಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಹುನ್ನಾರ ನಡೆದಿದೆ. ಇದಕ್ಕಾಗಿ ಸಿನಿಮಾದಂತೆ ಸ್ಕ್ರಿಪ್ಟ್ ರೆಡಿಯಾಗಿದೆ ಎಂದು ಆರೋಪಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv