ನಾಳೆ ಯಡಿಯೂರಪ್ಪನವರ ಅಸಲಿ ಡೈರಿ ಬಿಡುಗಡೆ ಮಾಡುತ್ತೇನೆ: ವಿನಯ್ ಹೊಸ ಬಾಂಬ್​

 ಬೆಂಗಳೂರು: ನಾಳೆ ಯಡಿಯೂರಪ್ಪನವರ ಅಸಲಿ ಡೈರಿ ಬಿಡುಗಡೆ ಮಾಡುತ್ತೇನೆ. ನನಗೆ ಪ್ರಾಣ ಬೆದರಿಕೆ ಇದ್ದು ಗನ್ ಮ್ಯಾನ್ ಒದಗಿಸಿ ಎಂದು ಬೆಜೆಪಿ ಮಾಜಿ  ಮಾಧ್ಯಮ ಸಂಚಾಲಕ ವಿನಯ್, ತನ್ನ ವಕೀಲರೊಂದಿಗೆ ಆಗಮಿಸಿ ನಗರದ ಅಮೃತಹಳ್ಳಿ ಪೊಲೀಸರ ಮೊರೆ ಹೋಗಿ ಹೊಸ ಬಾಂಬ್​ ಸಿಡಿಸಿದ್ದಾರೆ. 2017ರಲ್ಲಿ ಜನವರಿ 11ರಂದು ವಿನಯ್ ಅಪಹರಣಕ್ಕೆ ಯತ್ನ ನಡೆದಿತ್ತು. ನಂತರ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ  ಮಾಡಲಾಗಿತ್ತು. ಇಂದು ವಿನಯ್​ ನನ್ನ ಹತ್ರ ಯಡಿಯೂರಪ್ಪನವರಿಗೆ ಸಂಬಂಧಿಸಿದ ಡೈರಿ ಹಾಗೂ ಮೊಡಮ್ ಇದೆ, ಅದಕ್ಕೆ ರಕ್ಷಣೆ ಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv