ರಜನಿಕಾಂತ್ ಕ್ಷಮೆ ಕೇಳಿದ್ರೂ ‘ಕಾಲ’ಗೆ ಅವಕಾಶ ಇಲ್ಲ: ವಾಟಾಳ್

ಕಲಬುರ್ಗಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಜನಿಕಾಂತ್ ಅಭಿನಯದ ‘ಕಾಲ’ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಅಂತಾ ಕನ್ನಡ‌ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತನಾಡಲಾಗಿದೆ. ಇದೇ ತಿಂಗಳು 7 ರಂದು ಚಿತ್ರ ಬಿಡುಗಡೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಕಾವೇರಿ ವಿವಾದ ವಿಚಾರವಾಗಿ ರಜನಿಕಾಂತ್ ತಮಿಳುನಾಡು ಪರ ನಿಂತಿದ್ದಾರೆ. ಈ ಹಿಂದೆ ಬಾಹುಬಲಿ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಕಟ್ಟಪ್ಪ ಪಾತ್ರಧಾರಿ ಕ್ಷಮೆ ಕೇಳಿದ್ದರು. ಹೀಗಾಗಿ ಬಾಹುಬಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ರಜನಿಕಾಂತ್ ಕ್ಷಮೆ ಕೇಳಿದ್ರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv