‘ಕೇಜ್ರಿವಾಲ್​​ಗೆ 7ರಲ್ಲಿ 4 ಕ್ಷೇತ್ರ ಬಿಟ್ಟುಕೊಡಲು ರೆಡಿ, ಆದ್ರೆ ಸಮಯ ಮೀರುತ್ತಿದೆ’

ನವದೆಹಲಿ: ಲೋಕಸಭೆ ಚುನಾವಣೆ ದಿನೇ ದಿನೇ ಹತ್ತಿರ ಆಗ್ತಿದೆ. ಆದ್ರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್​ ಮೈತ್ರಿ ಬಗ್ಗೆ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಮೈತ್ರಿ ನಡೆಯುತ್ತೋ, ಇಲ್ಲವೋ ಅನ್ನೋ ಕುತೂಹಲಗಳ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಂಗಳಕ್ಕೆ ಚೆಂಡು ಒಂದನ್ನ ಎಸೆದಿದ್ದಾರೆ.

ಕೇಜ್ರಿವಾಲ್ ಅವರನ್ನ ಟೀಕಿಸುತ್ತಲೇ ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಆಪ್ ಹಾಗೂ ಕಾಂಗ್ರೆಸ್​ ನಡುವೆ ಮೈತ್ರಿಯಿಂದ ಬಿಜೆಪಿಗೆ ಸೋಲು ಪಕ್ಕಾ. ನಾವು ಆಪ್​ಗೆ 4 ಕ್ಷೇತ್ರಗಳನ್ನ ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ ಮಿಸ್ಟರ್ ಅರವಿಂದ್ ಕೇಜ್ರಿವಾಲ್ ಮತ್ತೊಂದು ಯುಟರ್ನ್​ ತೆಗೆದುಕೊಂಡಿದ್ದಾರೆ. ನಮ್ಮ ಬಾಗಿಲು ಇನ್ನೂ ತೆರೆದಿರುತ್ತದೆ, ಬಟ್ ದ ಕ್ಲಾಕ್ ಇಸ್​ ರನ್ನಿಂಗ್ ಔಟ್​ ಅಂತಾ ಕುಟುಕಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಏಳು ಸ್ಥಾನಗಳನ್ನೂ ಗೆದ್ದಿತ್ತು. ಈ ಮೂಲಕ ಅರವಿಂದ್ ಕೇಜ್ರಿವಾಲ್ ಭಾರೀ ಮುಖಭಂಗ ಅನುಭವಿಸಿದ್ದರು. ಈ ಬಾರಿ ರಾಜಕೀಯ ತಜ್ಞರ ವಿಶ್ಲೇಷಣೆ ಪ್ರಕಾರ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಒಟ್ಟಾಗಿ ಹೋದರೆ, ಬಿಜೆಪಿ ಇಲ್ಲಿ 7 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಮೇ 12 ರಂದು ದೆಹಲಿಯಲ್ಲಿ ಚುನಾವಣೆ ನಡೆಯಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv