ಬಂಧನವಾಗ್ತಾರಾ ಬಿಜೆಪಿ MLA ಶಿವನಗೌಡ ನಾಯಕ್..!?

ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್​ ಗೆ ಸಂಕಷ್ಟ ಎದುರಾಗಲಿದೆ. ಆಪರೇಷನ್​ ಕಮಲಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಆಡಿಯೋ ಬೈಟ್​ ಒಂದನ್ನು ಬಿಡುಗಡೆ ಮಾಡಿದ್ದರು. ಈ ಆಡಿಯೋದಲ್ಲಿ ಶಿವನಗೌಡ ನಾಯಕ್​ ಸ್ಪೀಕರ್​ ಕುರಿತಂತೆ ಸಭಾಪತಿಗಳನ್ನೇ 50 ಕೋಟಿಗೆ ಡೀಲ್​ ಮಾಡಿದ್ದೀವಿ ಅಂತಾ ಹೇಳಿದ್ದರು.

ಈ ಕುರಿತಂತೆ ಇಂದು ಸದನದಲ್ಲಿ ಸಭಾಪತಿ ರಮೆಶ್​ ಕುಮಾರ್​ ಭಾವುಕರಾದರು. ಈ ಆಡಿಯೋ ಕುರಿತಂತೆ ತನಿಖೆ ನಡೆಸುವಂತೆ ಸಿಎಂ ಕುಮಾರಸ್ವಾಮಿಗೆ ರೂಲಿಂಗ್​​ ನೀಡಿದರು. ಒಂದು ವೇಳೆ ಸ್ಪೀಕರ್​ ಅವರ ಸೂಚನೆ ಮೇರೆಗೆ ಸಿಎಂ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ಒಪ್ಪಿಸಿದ್ದಾರೆ. ಮುಂದೆ, ಎಸ್​ಐಟಿ ಎಫ್​ಐಆರ್​ ದಾಖಲಿಸಿಕೊಂಡ ಬಳಿಕ, ಶಾಸಕ ಶಿವನಗೌಡ ನಾಯಕ್ ಬಂಧನ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv