ಬೈಕ್​ ಸವಾರನ ಮೇಲೆ ಕಾಡಾನೆ ಅಟ್ಯಾಕ್​

ಕೊಡಗು: ಬೈಕ್ ಸವಾರನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಸವಾರ ಅಪಾಯದಿಂದ ಪಾರಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಮಜಿದ್ ಎಂಬುವವರು ತೆರಳುತ್ತಿದ್ದ ಬೈಕ್ ಮೇಲೆ ಕಾಡಾನೆ ಅಟ್ಯಾಕ್ ಮಾಡಿದ್ದು, ಬೈಕ್​ನಿಂದ ಕೆಳಗೆ ಬಿದ್ದ ಮಜೀದ್​​ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುವಿಗೆ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕಾಡಾನೆ ದಾಳಿಯಿಂದ ಬೈಕ್ ಜಖಂ ಗೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv