ಗಂಡನನ್ನು ಹುಡುಕಿಕೊಡುವಂತೆ ಹೆಂಡತಿ ಧರಣಿ..!

ಕೋಲಾರ: ನಾಲ್ಕು ತಿಂಗಳ ಹಿಂದೆ ಶಶಿಕುಮಾರ್ ಹಾಗೂ ಪ್ರತಿಮಾ ಎಂಬ ಜೋಡಿ ಪ್ರೀತಿಸಿ, ಪೊಲೀಸರ ಸಮಕ್ಷಮದಲ್ಲಿ ಮದುವೆಯಾಗಿದ್ರು. ಮದುವೆಯಾದ ನಂತರ ಪತಿ ಶಶಿಕುಮಾರ್ ನಾಪತ್ತೆಯಾಗಿದ್ದರು. ಈಗ ಹೆಂಡತಿ ಗಂಡನನ್ನು ಹುಡುಕಿ ಕೊಡಿ ಎಂದು ಮನೆ ಎದುರು ಧರಣಿ ನಡೆಸಿರುವ ಘಟನೆ ಮಾಲೂರು ತಾಲೂಕಿನ ಭಂಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ತನ್ನ ಪತಿ ಶಶಿಕುಮಾರ್ ಮನೆ ಎದುರು ಪತ್ನಿ ಪ್ರತಿಮಾ ನಿನ್ನೆ ಸಂಜೆಯಿಂದ ಧರಣಿ ಮಾಡುತ್ತಿದ್ದಾರೆ. ಇದಲ್ಲದೆ ಪತಿ ಮನೆ ಮುಂದೆ ಪತ್ನಿ ಧರಣಿ ಮಾಡುತ್ತಿದ್ದಾಗಲೇ, ಪತಿಯ ತಂದೆ-ತಾಯಿ‌ ಕೂಡಾ‌ ಗ್ರಾಮದಿಂದ ನಾಪತ್ತೆಯಾಗಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv