ಪತ್ನಿಯನ್ನ ಕೊಂದ ಪತಿ ಆಕೆ ಕಿವಿಯನ್ನ ಏನ್ಮಾಡಿದ ಗೊತ್ತಾ..?

ಚಿಕ್ಕಬಳ್ಳಾಪುರ: ಶೀಲಶಂಕಿಸಿ ಗಂಡನೊಬ್ಬ ಪತ್ನಿಯ ಕಿವಿ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕ ದಾಸೇನಹಳ್ಳಿಯಲ್ಲಿ ನಡೆದಿದೆ.

ಚಿಕ್ಕ ದಾಸೇನಹಳ್ಳಿ ಹೊರಹೊಲಯದ ನೀಲಗಿರಿ ತೋಪಿನಲ್ಲಿ ವಾಸವಾಗಿರುವ ಆದಿನಾರಯಣ, ಹೆಂಡತಿ ವೆಂಕಟಲಕ್ಷ್ಮಿ(28) ಶೀಲದ ಬಗ್ಗೆ ಅನುಮಾನಗೊಂಡು ಕಿವಿ ಕತ್ತರಿಸಿ, ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ. ಬಳಿಕ ಹೆಂಡತಿಯ ಕಿವಿ ಸಮೇತ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.
ಇಬ್ಬರು ಮಕ್ಕಳೊಂದಿದ್ದ ಆದಿನಾರಯಣ ಮತ್ತು ವೆಂಕಟಲಕ್ಷ್ಮಮ್ಮ ದಂಪತಿ ದಿನನಿತ್ಯ ಜಗಳ ಮಾಡಿಕೊಳ್ಳತ್ತಿದ್ದರು ಎಂದು ತಿಳಿದು ಬಂದಿದೆ. ಮೃತದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸ್ಥಳಕ್ಕೆ ವೃತ್ತ ನಿರೀಕ್ಷಕ ಸಿದ್ದರಾಜು, ಪಿಎಸ್​ಐ ಪ್ರದೀಪ್​ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *