3 ಕಿ.ಮೀ. ರಸ್ತೆಯಲ್ಲಿ 1,000 ಸ್ಟ್ರೀಟ್​​ ಲೈಟ್ಸ್​​..! ಇದಕ್ಕೆ ಕಾರಣ ಏನ್ ಗೊತ್ತಾ?

ಅಬ್ಬಾ ಕೆಲವೊಮ್ಮೆ ಜನ ಹೇಗೆಲ್ಲಾ ಇರ್ತಾರಂದ್ರೆ, ಬಿಟ್ಟಿ ಬರೋದಾದ್ರೆ ನನಗೂ ಇರಲಿ, ನನ್ನ ಮೊಮ್ಮಕ್ಕಳು, ಮರಿ ಮಕ್ಕಳಿಗೂ ಇರಲಿ ಅನ್ನೋ ಮನೋಭಾವ ಇರುತ್ತೆ. ಅದಕ್ಕೆ ಬೆಸ್ಟ್​​ ಎಕ್ಸಾಂಪಲ್ ಇಲ್ಲಿದೆ ನೋಡಿ. ಕೆಲವು ಹಳ್ಳಿಗಳಿಗೆ ಹೋದ್ರೆ ರಸ್ತೆಗಳಲ್ಲಿ ಒಂದು ಲೈಟ್​ ಕೂಡ ಇರಲ್ಲ. ಎಷ್ಟೇ ಕಿಲೋಮೀಟರ್​ ಕ್ರಮಿಸಿದ್ರೂ ಒಂದೂ ಬೀದಿ ದೀಪ ಇರಲ್ಲ. ಆದ್ರೆ ಚೀನಾದಲ್ಲಿರೋ ಈ ರಸ್ತೆಯಲ್ಲಿ ಗ್ರಾಮಸ್ಥರು ಸಾಲು ಸಾಲಾಗಿ ಬೀದಿದೀಪಗಳನ್ನ ಅಳವಡಿಸಿದ್ದಾರೆ. ಕ್ಸಿಯಾನ್​​ನ ಹೊರವಲಯದಲ್ಲಿರುವ ಈ ರಸ್ತೆಯಲ್ಲಿ ಒಂದಲ್ಲ , ಎರಡಲ್ಲ ಬರೋಬ್ಬರಿ ಒಂದು ಸಾವಿರ ಸ್ಟ್ರೀಟ್​​ ಲೈಟ್​​ಗಳನ್ನ ಅಳವಡಿಸಲಾಗಿದೆ.

ತಾವೋಜಿಯಾ ಹೆಸರಿನ ಈ ಗ್ರಾಮದಲ್ಲಿ 3 ಕಿ.ಮೀ. ಉದ್ದದ ರಸ್ತೆಯಲ್ಲಿ 1000 ಸ್ಟ್ರೀಟ್​ ಲೈಟ್ಸ್​ ಇವೆ. ಅದ್ರಲ್ಲೂ 500 ಮೀಟರ್​​​ ಅಂತರದಲ್ಲೇ 200 ಸ್ಟ್ರೀಟ್​​ ಲೈಟ್​​ಗಳನ್ನ ಹಾಕಲಾಗಿದೆ. ರಾತ್ರಿ ಹೊತ್ತು ಇಷ್ಟೂ ಬೀದಿದೀಪಗಳಿಂದ ಝಗಮಗಿಸೋ ಈ ರಸ್ತೆಯ ಫೋಟೋಗಳು ಚೀನಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಒಂದು ಸ್ಟ್ರೀಟ್​​ಲೈಟ್​​ಗೂ ಮತ್ತೊಂದಕ್ಕೂ 30 ರಿಂದ 50 ಮೀಟರ್​​ ಅಂತರ ಇರುವಂತೆ ಅಳವಡಿಸಲಾಗುತ್ತೆ. ಆದ್ರೆ ಈ ರಸ್ತೆಯಲ್ಲಿ ಇಷ್ಟೊಂದು ಸ್ಟ್ರೀಟ್​​ ಲೈಟ್​ಗಳು ಅಳವಡಿಸಿರೋದಾದ್ರೂ ಯಾಕೆ ಅನ್ನೋ ಪ್ರಶ್ನೆ ಬರದೇ ಇರಲ್ಲ. ಇದಕ್ಕೆ ಕಾರಣವಿದೆ.

ಸ್ಥಳೀಯ ವರದಿಗಳ ಪ್ರಕಾರ, ಗ್ರಾಮಸ್ಥರು ಸರ್ಕಾರದಿಂದ ಲೂಟಿ ಹೊಡೆಯಲು ಇಷ್ಟೊಂದು ಬೀದಿದೀಪಗಳನ್ನ ಅಳವಡಿಸಿದ್ದಾರೆ ಎನ್ನಲಾಗಿದೆ. ತಾವೋಜಿಯಾ ಗ್ರಾಮ ಕ್ಸಿಯಾನ್ ಇಂಟರ್​ನ್ಯಾಷನಲ್ ಟ್ರೇಡ್​ ಆ್ಯಂಡ್​ ಲಾಗಿಸ್ಟಿಕ್ಸ್​​ ಪಾರ್ಕ್​​​​​​​​​ನ ಭಾಗವಾಗಿದ್ದು, ಈ ಪ್ರದೇಶವನ್ನ ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಈ ವಿಷಯ ತಿಳಿದು ಲಾಭ ಪಡೆಯಲು ಯೋಚಿಸಿರೋ ಗ್ರಾಮಸ್ಥರು ಎಕ್ಸ್​​ಟ್ರಾ ಸ್ಟೀಟ್​​ ಲೈಟ್​​ಗಳನ್ನ ಹಾಕಿದ್ದಾರೆ. ಹೀಗೆ ಮಾಡಿದ್ರೆ ತಮಗೆ ಸರ್ಕಾರದಿಂದ ಬರೋ ಪರಿಹಾರ ಹಣ ಹೆಚ್ಚಾಗುತ್ತೆ ಅನ್ನೋದು ಅವರ ಆಲೋಚನೆ. ಇಷ್ಟೆಲ್ಲಾ ಖತರ್ನಾಕ್ ಐಡಿಯಾ ಉಪಯೋಗಿಸಿರೋ ಈ ಗ್ರಾಮಸ್ಥರು ಇದರಲ್ಲಿ ಯಶಸ್ವಿ ಆಗ್ತಾರಾ? ಗೊತ್ತಿಲ್ಲ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv