ಕಾರ್ಯಕ್ರಮಕ್ಕೆ ಹೋಗೊದಕ್ಕೆ ನಿಮಗೆ ಹೇಳಿದ್ಯಾರು..?

ಟೀಮ್​ ಇಂಡಿಯಾ ಆಲ್​​​ರೌಂಡರ್​ ಹಾರ್ದಿಕ್​ ಪಾಂಡ್ಯ ಹಾಗೂ ಓಪನರ್​ ಬ್ಯಾಟ್ಸ್​ಮನ್​ ಕೆ. ಎಲ್​. ರಾಹುಲ್​ಗೆ, ಕಾಫಿ ವಿತ್​ ಕರಣ್​ ಕಂಟಕ ಸದ್ಯಕ್ಕೆ ಕಳೆಯುವಂತೆ ಕಾಣುತ್ತಿಲ್ಲ. ವಿವಾದಾತ್ಮಕ ಹೇಳಿಕೆಗಳನ್ನ ನೀಡುವ ಮೂಲಕ ಟೀಕೆಗೆ ಗುರಿಯಾಗಿರುವ ಆಟಗಾರರ ವಿರುದ್ಧ, ಬಿಸಿಸಿಐ ನೋಟಿಸ್​ ಜಾರಿ ಮಾಡಿದೆ. ಈ ನಡುವೆ ಹಾರ್ದಿಕ್​ ಪಾಂಡ್ಯ ಕ್ಷಮೆಯನ್ನು ಯಾಚಿಸಿದ್ದಾರೆ. ಆದರೆ ಕರಣ್ ಜೋಹರ್ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ರಾಹುಲ್ ಮತ್ತು ಪಾಂಡ್ಯರಿಗೆ ಅನುಮತಿ ನೀಡಿದ್ದು ಯಾರು ಎನ್ನುವ ಪ್ರಶ್ನೆ ಎದ್ದಿದೆ. ಆಟಗಾರರು ಸೇರಿದಂತೆ ಕ್ರಿಕೆಟಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಧ್ಯಮ ವಿಷಯಗಳ ಮೇಲೆ ಬಿಸಿಸಿಐ ನಿಯಂತ್ರಣವನ್ನ ಹೊಂದಿದೆ. ಆದರೆ COA ಮುಖ್ಯಸ್ಥರಾದ ವಿನೋದ್ ರಾಯ್, ಪ್ರಮುಖ ಪ್ರಕಟಣೆಗಳನ್ನ ಸುದ್ದಿ ಸಂಸ್ಥೆಗಳ ಮೂಲಕ ಪ್ರಕಟಿಸಲು ಆದ್ಯತೆ ನೀಡುತ್ತಿದ್ದಾರೆ. ಈ ನಡುವೆ ಟೀಮ್​ ಇಂಡಿಯಾ ಆಟಗಾರರಾಗಿರುವ ಕೆ. ಎಲ್​. ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯ ಕಾಫಿ ವಿತ್​ ಕರಣ್​ ಟಾಕ್​ ಶೋನಲ್ಲಿ ಭಾಗವಹಿಸಲು ಯಾರ ಬಳಿ ಅನುಮತಿ ಪಡೆದಿದದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv