ಬಿಳಿ ಕಾಗೆ ಕಾಣಿಸಿಕೊಂಡಿದೆ.. ಏನಾಗುತ್ತೆ ಮುಂದೆ..?

ಮೈಸೂರು: ಕೆಆರ್ ನಗರದ ಭೇರ್ಯ ಗ್ರಾಮದಲ್ಲಿ ಬಿಳಿ ಕಾಗೆಯೊಂದು ಕಾಣಿಸಿಕೊಂಡಿದೆ. ಇದು ಗ್ರಾಮಸ್ಥರ ಆಚ್ಚರಿಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ದಿನಸಿ ಅಂಗಡಿ, ಬೇಕರಿ ಮುಂದೆ ಪ್ರತ್ಯಕ್ಷವಾಗ್ತಿದ್ದ ಬಿಳಿ ಕಾಗೆ ಇದೀಗ ಗ್ರಾಮದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

ಬಿಳಿ ಕಾಗೆ ಕಾಣಿಸಿಕೊಂಡ್ರೆ ಶುಭವೋ? ಅಶುಭವೋ ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ. ಈ ಹಿಂದೆ ಕೋಡಿ ಮಠದ ಶ್ರೀಗಳು, ‘ಬಿಳಿ ಕಾಗೆ ಕಾಣಿಸಿಕೂಳ್ಳುವುದು. ನಾಡಿಗೆ ಕೇಡಾಗುತ್ತದೆ’ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಬಿಳಿ ಕಾಗೆಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಬೆಳವಣಿಗೆಗಳಿಗೂ ಬಿಳಿ ಕಾಗೆಗೂ ತಳಕು ಹಾಕಲಾಗುತ್ತಿದೆ? ಆಪತ್ತಿನ ಮುನ್ಸೂಚನೆ ನೀಡ್ತಿದ್ಯಾ ಅನ್ನೋ ಮಾತುಗಳು ಸಹ ಕೇಳಿ ಬಂದಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv