ಬೆಂಗಳೂರಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ..!

ಬೆಂಗಳೂರು: ನಗರದಲ್ಲಿ ಅಪರೂಪದ ಬಿಳಿ ನಾಗರಹಾವೊಂದು ಪತ್ತೆಯಾಗಿದೆ. ಜ್ಯುಡಿಶಿಯಲ್‌ ಲೇಔಟ್​ನಲ್ಲಿ ಸುಮಾರು 6 ಅಡಿ ಉದ್ದವಿರುವ ಬಿಳಿ‌ ನಾಗರಹಾವು ಕಾಣಿಸಿದೆ. ಈ ಅಪರೂಪದ ಹಾವನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ಸಿಬ್ಬಂದಿ ಮೋಹನ್ ರಕ್ಷಣೆ ಮಾಡಿದ್ದಾರೆ. ಸದ್ಯ ಮೋಹನ್ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಬಿಳಿ ನಾಗರಹಾವುಗಳನ್ನ ಅಲ್ಬಿನೋ ನಾಗರಹಾವು ಅಥವಾ ಲ್ಯೂಸಿಟಿಕ್​ ನಾಗರಹಾವು ಅಂತ ವಿಂಗಡಿಸಲಾಗುತ್ತದೆ. ಇವು ಕಾಣಸಿಗೋದು ತುಂಬಾ ವಿರಳ. ಹಾವೊಂದೇ ಅಲ್ಲ, ಯಾವುದೇ ಪ್ರಾಣಿ ತನ್ನ ನೈಸರ್ಗಿಕ ಚರ್ಮದ ಬಣ್ಣದ ಬದಲು ಸಂಪೂರ್ಣವಾಗಿ ಅಥವಾ ಭಾಗಶಃ ಬಿಳಿಯದಾಗಿದ್ದಾಗ ಅವನ್ನು ಅಲ್ಬಿನೋ ಪ್ರಾಣಿಗಳು ಅಥವಾ ಲ್ಯೂಸಿಟಿಕ್ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳು ತಿಳಿ ಹಳದಿ ಬಣ್ಣದಲ್ಲೂ ಇರಬಹುದು. ಲ್ಯೂಸಿಟಿಕ್ ಪ್ರಾಣಿಗಳಲ್ಲಿ ದೇಹದ ಸಂಪೂರ್ಣ ಅಥವಾ ಭಾಗಶಃ ಚರ್ಮ ಬೆಳ್ಳಗಿದ್ದರೆ, ಕಣ್ಣು ಮಾತ್ರ ಸಾಮಾನ್ಯ ಬಣ್ಣದಲ್ಲೇ ಇರುತ್ತದೆ. ಆದ್ರೆ ಅಲ್ಬಿನೋ ಪ್ರಾಣಿಗಳಲ್ಲಿ ಕಣ್ಣು ಕೂಡ ತಿಳಿಯಾಗಿರುತ್ತದೆ. ಚರ್ಮದ ಮೆಲಾನಿನ್ ಹಾಗೂ ಇತರೆ ಪಿಗ್​​ಮೆಂಟ್​ಗಳ​ ಕೊರತೆಯಿಂದ ಈ ರೀತಿ ಆಗುತ್ತದೆ. ಮನುಷ್ಯರಲ್ಲೂ ಕೂಡ ಇದನ್ನು ಕಾಣಬಹುದು. ಅಲ್ಬಿನೋ ಅಥವಾ ಲ್ಯೂಸಿಟಿಕ್ ಪ್ರಾಣಿಗಳು ತಮ್ಮ ಚರ್ಮದ ಬಣ್ಣದಿಂದಲೇ ಭಕ್ಷಕ ಪ್ರಾಣಿಗಳಿಗೆ ಸುಲಭವಾಗಿ  ಆಹಾರವಾಗಿಬಿಡುತ್ತವೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv