ಸ್ನಾನಕ್ಕೆ ಯಾವುದು ಬೆಸ್ಟ್​​ ಟೈಂ, ಬೆಳಗ್ಗೆಯೋ, ಸಂಜೆಯೋ?

ಮೈ-ಮನಸ್ಸಿನ ಆರೋಗ್ಯಕ್ಕೆ ಸ್ನಾನ ತುಂಬಾ ಮುಖ್ಯ. ಸ್ನಾನ ಹಲವು ಸೋಂಕು, ಅನಾರೋಗ್ಯ ಹಾಗೂ ಅಸ್ವಸ್ಥತೆಯಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಹೊತ್ತು ಸ್ನಾನ ಮಾಡಿದ್ರೆ, ಇನ್ನೂ ಕೆಲವರು ಸಂಜೆ ಹೊತ್ತು ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಯಾವ ಸಮಯದಲ್ಲಿ ಸ್ನಾನ ಮಾಡುವುದರಿಂದ ಹೆಚ್ಚು ಹೆಲ್ತ್‌ಗೆ ಒಳ್ಳೆಯದು ಎಂಬುದರ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

ಬೆಳಗ್ಗೆ ಹೊತ್ತಿನಲ್ಲಿ ಸ್ನಾನ ಮಾಡಿದ್ರೆ ಒಳ್ಳೆಯದೇ. ಆದ್ರೆ ಸಂಜೆ ಟೈಮ್ನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯ ಮತ್ತು ನೈರ್ಮಲ್ಯ ಎರಡಕ್ಕೂ ಉತ್ತಮ. ಚರ್ಮದ ಕೊಳೆಯನ್ನು ತೆಗೆಯಲು ರಾತ್ರಿ ಮಲಗುವುದಕ್ಕೂ ಮುನ್ನ ಸ್ನಾನ ಮಾಡಬೇಕು. ಆ್ಯಕ್ಟಿವ್ ಆಗಿರಲು ಬೆಳಗಿನ ಸ್ನಾನ ಸಹಕಾರಿ. ಇದು ನಿಮ್ಮನ್ನು ದಿನವಿಡೀ ಅಲರ್ಟ್‌ ಆಗಿಡುತ್ತೆ. . ಡರ್ಮಟಾಲಜಿ ಅಸೋಸಿಯೇಟ್ ಕ್ಲಿನಿಕಲ್ ಪ್ರಾಧ್ಯಾಪಕರಾಗಿರುವ ಮೊನಾ ಗೊಹಾರಾ ಹೇಳುವ ಪ್ರಕಾರ, ಬೆಳಿಗ್ಗೆ ನೀವು ಕೆಲಸಕ್ಕೆ ಹೋಗುತ್ತಿದ್ದರೆ, ಬೆಳಗಿನ ಸ್ನಾನ ಉತ್ತಮ. ಬೆಳಗಿನ ಸ್ನಾನ ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಎನ್ನುತ್ತಾರೆ.

ಸಂಜೆ ವೇಳೆ ಸ್ನಾನ ಮಾಡುವುದು ಏಕೆ ಉತ್ತಮ?

ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಇನ್‌ಫರ್ಮೇಶನ್ ಪ್ರಕಾರ,  ಬೆಚ್ಚಗಿನ ನೀರಿನಿಂದ ಸಂಜೆ ಸ್ನಾನ ಮಾಡಿದ್ರೆ ದೇಹದಲ್ಲಿನ ಉಷ್ಣತೆಯ ನಿಯಂತ್ರಣ ಹೊಂದಲು ಸಹಾಯಕಾರಿಯಾಗುತ್ತದೆ. ಇದು ಸುಖ ನಿದ್ರೆಗೆ ಸಹಾಯ ಮಾಡುತ್ತದೆ. ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ. ಆದ್ದರಿಂದ ಬೆಳಗ್ಗೆ ಹಾಗೂ ಸಂಜೆ ಎರಡೂ ಬಾರಿ ಸ್ನಾನ ಮಾಡಿದ್ರೂ ಕೂಡಾ ಒಳ್ಳೆಯದೇ. ನಿದ್ರಾಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಂಜೆ ಸಮಯದಲ್ಲಿ ಸ್ನಾನ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಸಂಜೆ ವೇಳೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದ್ರೆ, ಬಾಡಿ ಮಸಲ್ಸ್‌ಗೂ (ಸ್ನಾಯುಗಳ ವಿಶ್ರಾಂತಿ)ಗೆ ಸಹಾಯಕಾರಿಯಾಗಬಲ್ಲದು. ಆರೋಗ್ಯಕ್ಕೆ ಹಾಗೂ ಚರ್ಮದ ಸ್ವಚ್ಛತೆಗೂ ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸಂಜೆ ಟೈಮ್ ಸ್ನಾನ ಮಾಡೋದು ಹಾಸಿಗೆಯನ್ನ ಸ್ವಚ್ಛವಾಗಿಟ್ಟುತೊಳ್ಳುವುದಕ್ಕೂ ಒಳ್ಳೆಯದಂತೆ.

ಬೆಳಗಿನ ಸ್ನಾನಕ್ಕೆ ನೀವು ಆದ್ಯತೆ ನೀಡುತ್ತಿದ್ದರೆ ಒಳ್ಳೆಯದು. ನಿಮಗೆ ಅನುಕೂಲವಾಗುವ ವೇಳೆ ಸ್ನಾನ ಮಾಡಿದ್ರೆ ಉತ್ತಮ. ಆದ್ರೆ ಮುಖ್ಯವಾಗಿ ಚರ್ಮದ ಆರೋಗ್ಯ ಪಡೆಯಬೇಕಾದ್ರೆ ಸಂಜೆ ಹೊತ್ತು ಸ್ನಾನ ಮಾಡಿದ್ರೆ ಉತ್ತಮವಂತೆ. ನಿದ್ರಾಹೀನತೆಯಿಂದ ಬಳಲುತ್ತಿದ್ರೆ ಸಂಜೆ ವೇಳೆ ಸ್ನಾನ ಮಾಡಿದ್ರೆ ಹೆಚ್ಚು ಸಹಾಯಕಾರಿ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv