ಕೂಡಲೇ ವಾಟ್ಸ್​​ಆ್ಯಪ್​ ಅಪ್​​ಡೇಟ್​ ಮಾಡಿ, ಹಲವಾರು ಮೊಬೈಲ್​ಗಳಿಗೆ ಹರಡಿದೆ spyware..!

ವಾಟ್ಸ್​​ಆ್ಯಪ್​​​​​​​​ನಲ್ಲಿ ಎಂಡ್​ ಟು ಎಂಡ್​ ಎನ್​​ಕ್ರಿಪ್ಷನ್​ ಇರೋದ್ರಿಂದ, ನೀವು ಮೆಸೇಜ್​​ ಕಳಿಸುವಾಗ ಯಾವುದೇ ಮೂರನೇ ವ್ಯಕ್ತಿ ನಿಮ್ಮ ಮಾಹಿತಿಯನ್ನ ಹ್ಯಾಕ್ ಮಾಡಲು ಸಾಧ್ಯವಾಗಲ್ಲ. ಹೀಗಾಗಿಯೇ ಪ್ರಪಂಚದಾದ್ಯಂತ  ಕೋಟ್ಯಾಂತರ ಜನರು ಯಾವುದೇ ಆತಂಕವಿಲ್ಲದೆ ಈ ಆ್ಯಪ್ ಬಳಸುತ್ತಿದ್ದಾರೆ. ಸಾಕಷ್ಟು ದೇಶಗಳಲ್ಲಿ ಸರ್ಕಾರಿ ಹಾಗೂ ಭದ್ರತಾ ಸಿಬ್ಬಂದಿ ಕೂಡ ವಾಟ್ಸ್​​ಆ್ಯಪ್​ ಬಳಸುತ್ತಿದ್ದಾರೆ. ಆದ್ರೆ ವಾಟ್ಸ್​​ಆ್ಯಪ್​ ವಾಯ್ಸ್​ ಕಾಲ್ ಮೂಲಕ ಸಾಕಷ್ಟು ಮೊಬೈಲ್​ಗಳಿಗೆ  ​​spyware ಹರಡಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಗಿದೆ.

ಹಲವಾರು ಜನರ ಫೋನ್​ಗಳಿಗೆ ವಾಟ್ಸ್​​ಆ್ಯಪ್​​ ವಾಯ್ಸ್​ ಕಾಲ್ ಮುಖಾಂತರ  ​​spyware ​​ ಹರಡಿರುವುದಾಗಿ ವಾಟ್ಸ್​ಆ್ಯಪ್​​​ ಸಂಸ್ಥೆ ಇಂದು ಒಪ್ಪಿಕೊಂಡಿದೆ. ಐಫೋನ್​ ಹಾಗೂ ಆ್ಯಂಡ್ರಾಯ್ಡ್​ ಎರಡೂ ಫೋನ್​ಗಳ ಮೇಲೆ ಈ ಸ್ಪೈವೆರ್ ಪರಿಣಾಮ ಬೀರಿದೆ ಅಂತ ತಿಳಿದುಬಂದಿದೆ. ಇದೇ ತಿಂಗಳ ಆರಂಭದಲ್ಲಿ ವಾಟ್ಸ್​​ಆ್ಯಪ್​ ವಾಯ್ಸ್​ ಕಾಲ್​​ಗೆ ಹೆಚ್ಚುವರಿ ಸೆಕ್ಯೂರಿಟಿ ಎನ್​​ಹ್ಯಾನ್ಸ್​ಮೆಂಟ್​​ಗಳನ್ನ ಸೇರಿಸುವಾಗ ಸ್ಪೈವೇರ್​ ಬಗ್ಗೆ ಗೊತ್ತಾಗಿದೆ. ಇದರಲ್ಲಿ ಆ್ಯಪ್​ ಬಳಕೆದಾರರ ಪಾತ್ರವೇನೂ ಇರುವುದಿಲ್ಲ. ಸ್ಪೈವೇರ್​ಗೆ ಟಾರ್ಗೆಟ್​ ಆದ ಬಳಕೆದಾರರಿಗೆ ಅಪರಿಚಿತ ನಂಬರ್​​ನಿಂದ ಫೋನ್​ ಕಾಲ್ ಬರುತ್ತದೆ. ಆ ಕರೆಯನ್ನ ಸ್ವೀಕರಿಸಿದ್ರೂ, ಸ್ವೀಕರಿಸದೇ ಇದ್ರೂ ಸ್ಪೈವೇರ್​ ಹರಡುತ್ತದೆ ಎಂದು ವಿವರಿಸಿದ್ದಾರೆ. ಈ ದೋಷವನ್ನ ಸರಿಪಡಿಸಲು ವಾಟ್ಸ್​ಆ್ಯಪ್​ ಎಂಜಿನಿಯರ್​​​​ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈಗಾಗಲೇ ವಾಟ್ಸ್​​ಆ್ಯಪ್​ ಅಪ್​ಡೇಟ್​​ ಬಿಟ್ಟಿದ್ದು, ಬಳಕೆದಾರರು ಸ್ಪೈವೇರ್​​ನಿಂದ ರಕ್ಷಣೆ ಪಡೆಯಲು ಕೂಡಲೇ ಲೇಟೆಸ್ಟ್​​ ವರ್ಷನ್​ಗೆ ​​ಆ್ಯಪ್​​ ಅಪ್​ಡೇಟ್​ ಮಾಡುವಂತೆ ಸಂಸ್ಥೆ ಹೇಳಿದೆ.

ಇನ್ನು ಈ ಸ್ಪೈವೇರ್​​ನಿಂದ ಎಷ್ಟು ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಹಾಗೂ ಅವರನ್ನ ಟಾರ್ಗೆಟ್​ ಮಾಡಿರುವವರು ಯಾರು ಅನ್ನೋ ಬಗ್ಗೆ ವಾಟ್ಸ್​ಆ್ಯಪ್​ ಸದ್ಯಕ್ಕೆ ಸ್ಪಷ್ಟಪಡಿಸಿಲ್ಲ. ಆದ್ರೂ  ಇಸ್ರೇಲ್​​ನ ಸೈಬರ್​ ಇಂಟೆಲಿಜೆನ್ಸ್​ ಸಂಸ್ಥೆ ಎನ್​​ಎಸ್​ಓ ಗ್ರೂಪ್​ನಿಂದ ಈ ಸ್ಪೈವೆರ್ ಬಂದಿದೆ ಎಂದು ಶಂಕಿಸಲಾಗಿದೆ.​​ ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಇಸ್ರೇಲ್​​ ಕಂಪನಿಯ ಶಕ್ತಿಶಾಲಿ ಸ್ಪೈವೇರ್​ ಹರಡುವಿಕೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಸ್ಪೈವೇರ್ ಸ್ಮಾರ್ಟ್​​ಫೋನ್​​ಗಳನ್ನ ಹ್ಯಾಕ್ ಮಾಡಿ, ಕ್ಯಾಮೆರಾಗಳನ್ನ ಕಂಟ್ರೋಲ್​ಗೆ ತೆಗೆದುಕೊಂಡು ಅವನ್ನ ಕಣ್ಗಾವಲಿಗೆ ಬಳಸೋ ಪುಟಾಣಿ ಸಾಧನಗಳನ್ನಾಗಿ ಮಾಡಿಬಿಡಬುದು. ಎನ್​​ಎಸ್​​ಓ ಸ್ಪೈವೇರ್​​ಗಳು ಸಾಕಷ್ಟು ಬಾರಿ ಪತ್ರಕರ್ತರು, ವಕೀಲರು ಹಾಗೂ ಮಾನವ ಹಕ್ಕು ಹೋರಾಟಗಾರರನ್ನ ಹ್ಯಾಕ್ ಮಾಡಿದೆ. ಅದ್ರಲ್ಲೂ ಸೌದಿ ಪತ್ರಕರ್ತ ಜಮಾಲ್​​ ಕಶೋಗಿಯ ಕೊಲೆ ಹಿಂದೆ ಸ್ಪೈವೇರ್ ಬಳಕೆಯಾಗಿದೆ ಎಂದು ಹೇಳಲಾಗುತ್ತದೆ.

ಕಶೋಗಿಯ ಆಪ್ತ ಸ್ನೇಹಿತರು ಸೇರಿದಂತೆ ಸ್ಪೈವೇರ್​ಗೆ ತುತ್ತಾದ ಹಲವಾರು ಮಂದಿ ಹಾಗೂ ಮೆಕ್ಸಿಕನ್​​ ಸಿವಿಲ್ ಸೊಸೈಟಿಯ ವ್ಯಕ್ತಿಗಳು ಎನ್​​ಎಸ್​​ಓ ವಿರುದ್ಧ ಹ್ಯಾಕಿಂಗ್ ಆರೋಪದ ಅಡಿ ಇಸ್ರೇಲ್​​ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಸ್ಪೈವೇರ್ ಅಂದ್ರೆ ಏನು? 

ಸ್ಪೈವೇರ್ ಒಂದು ಸಾಫ್ಟ್​ವೇರ್​ ಆಗಿದ್ದು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮಾಹಿತಿಯನ್ನು  ಸಂಗ್ರಹಿಸಲು ಬಳಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿಯ ಸಮ್ಮತಿ ಇಲ್ಲದೆ ಅವರ ಮಾಹಿತಿ  ಕುಕ್ಕೀಸ್​​ಗಳ ಮೂಲಕ ಬೇರೆಯವರಿಗೆ ತಲುಪುತ್ತಿರುತ್ತದೆ. ಅಥವಾ ಅವರ ಮೊಬೈಲ್​ ಮೇಲೆ ಬೇರೆಯವರು ನಿಯಂತ್ರಣ ಹೊಂದುವ ಅವಕಾಶ ಇರುತ್ತದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv