ಬಸ್ ಪ್ರಯಾಣ ದರ ಏರುತ್ತಾ..ಇಲ್ಲವಾ? ಸಿಎಂ ಹೇಳಿದ್ದೇನು..?!

ಬೆಂಗಳೂರು: ಉಪಚುನಾವಣೆ ಮುಗಿಯುವವರೆಗೂ ಬಸ್ ದರ ಪರಿಷ್ಕರಣೆ ಮಾಡದಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪೆಟ್ರೋಲ್-ಡೀಸೇಲ್ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಶೇ.18ರಷ್ಟು ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದವು.

ಇಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ.ಡಿ.ಸಿ.ತಮ್ಮಣ್ಣ ಹಾಗೂ ಸಾರಿಗೆ ಸಂಸ್ಥೆ ವಿವಿಧ ವಿಭಾಗಗಳ ಪ್ರಮುಖರಿಗೆ ಪ್ರಯಾಣ ದರ ಹೆಚ್ಷಿಸದಂತೆ ಸಿಎಂ ಕುಮಾರಸ್ವಾಮಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv