‘ಡಿಸಾಸ್ಟರಸ್ ​ಪ್ರೈಮ್ ​​ಮಿನಿಸ್ಟರ್​​’ ಅಂತಾನೂ ಸಿನಿಮಾ ಮಾಡ್ಬೇಕು: ಮಮತಾ ಬ್ಯಾನರ್ಜಿ

ಬರಾಸತ್​: ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಕುರಿತಾದ ‘ದಿ ಆಕ್ಸಿಡೆಂಟಲ್​​ ಪ್ರೈಮ್​​​ ಮಿನಿಸ್ಟರ್​​’ ಸಿನಿಮಾದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಪ್ರತಿಕ್ರಿಯೆ ನೀಡಿದ್ದಾರೆ. ‘ಆಕ್ಸಿಡೆಂಟಲ್​​ ಪ್ರೈಮ್​​ ಮಿನಿಸ್ಟರ್​​’ ಎಂದು ಸಿನಿಮಾ ಬರ್ತಿದೆ ಅಂದ್ರೆ, ‘ಡಿಸಾಸ್ಟರಸ್ ​ಪ್ರೈಮ್ ​​ಮಿನಿಸ್ಟರ್​​’ ಹೆಸರಿನ ಸಿನಿಮಾವನ್ನೂ ಸಹ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಇದು ಬರಲಿದೆ. ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಪ್ರಧಾನಿ ಮೋದಿಯನ್ನು ಕೆಣಕಿದ್ದಾರೆ.