ನಿಶ್ಚಿತಾರ್ಥಕ್ಕೆ ಹೋದವ್ರು.. ಮಸಣ ಸೇರಿದ್ರು..!

ತುಮಕೂರು: ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 5 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧುಗಿರಿ ಹೊರವಲಯದ ಕೆರೆಗಳಪಾಳ್ಯದಲ್ಲಿ ನಡೆದಿದೆ. ಮೃತಪಟ್ಟವರು ಬೆಂಗಳೂರಿನ‌ ಬೈಯಪ್ಪನಹಳ್ಳಿ ನಿವಾಸಿಗಳೆಂದು‌ ತಿಳಿದು ಬಂದಿದೆ. ಮೃತರೆಲ್ಲಾ ಪಾವಗಡ ತಾಲೂಕಿನ ಸಂಬಂಧಿಕರೊಬ್ಬರ‌ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದರು ಎನ್ನಲಾಗಿದೆ. ನಿಶ್ಚಿತಾರ್ಥ ಮುಗಿಸಿ ವಾಪಾಸ್ ಬರುವ ವೇಳೆ ಇಲ್ಲಿನ ಕೆರೆಗಳಪಾಳ್ಯದ ತಿರುವಿನಲ್ಲಿ ಸಿಮೆಂಟ್​ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಮೃತ ದೇಹಗಳು ಛಿದ್ರ ಛಿದ್ರವಾಗಿವೆ. ಈ ಸಂಬಂಧ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv