ವೀಕೆಂಡ್​ ಚಿತ್ರದ ರಿಲೀಸ್ ಡೇಟ್ ಫಿಕ್ಸ್​, ಮೇ 24ಕ್ಕೆ ರಿಲೀಸ್..!

ಹೊಸಬರ ಹೊಸ ಕನಸು ವೀಕೆಂಡ್ ಚಿತ್ರದ ರಿಲೀಸ್​ ಡೇಟ್ ಫಿಕ್ಸ್ ಆಗಿದ್ದು ಚಿತ್ರತಂಡ ಸಖತ್ ಥ್ರಿಲ್ ಆಗಿದೆ. ಹೌದು, ಇದೇ ತಿಂಗಳು ಅಂದ್ರೆ ಮೇ 24ರಂದು ವೀಕೆಂಡ್​ ಸಿನಿಮಾ ರಿಲೀಸ್​ ಆಗ್ತಿದೆ.  ಲವ್, ಸೆಂಟಿಮೆಂಟ್, ಸಸ್ಪೆನ್ಸ್​, ಥ್ರಿಲ್, ಕಾಮಿಡಿ, ತಾತ-ಮೊಮ್ಮಗನ ವಿಶಿಷ್ಟ ಕೆಮಿಸ್ಟ್ರಿಯೊಂದಿಗೆ ಅತ್ಯಂತ ಪ್ರಸ್ತುತ ಸಮಸ್ಯೆ ಹಾಗೂ ಲೈಫ್​ಸ್ಟೈಲ್​ ಕಥೆಯೊಂದಿಗೆ ಈ ಚಿತ್ರ ಒಳಗೊಂಡಿದೆ. ನಿರ್ದೇಶಕ ಶೃಂಗೇರಿ ಸುರೇಶ್​ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರೋ ಈ ಚಿತ್ರವನ್ನು ಮಂಜುನಾಥ್.ಡಿ ಮೆ.ಮಯೂರ ಮೋಷನ್ ಪಿಕ್ಚರ್ಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಿಸಿದ್ದಾರೆ. ಇನ್ನು ಕವಲುದಾರಿ, ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ವಿತರಣೆ ಮಾಡಿದ ಧೀರಜ್​ ಎಂಟರ್​ಪ್ರೈಸಸ್​​ ವೀಕೆಂಡ್​ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡ್ತಿರೋದು, ಚಿತ್ರತಂಡಕ್ಕೆ ಆನೆಬಲ ತಂದುಕೊಟ್ಟಿದೆ.

ಈಗಾಗಲೇ ವಿಭಿನ್ನ ಹಾಡುಗಳ ಮೂಲಕ ಗಮನ ಸೆಳೆದಿರೋ ವೀಕೆಂಡ್​ ಚಿತ್ರದಲ್ಲಿ, ಅನಂತ್ ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ್, ಗೋಪಿನಾಥ್ ಭಟ್ ಮುಂತಾದ ಪ್ರತಿಭಾವಂತರ ದೊಡ್ಡ ತಂಡವೇ ಈ ಚಿತ್ರದಲ್ಲಿ ನಟಿಸಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv