‘ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್, ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ’

ಮಂಡ್ಯ: ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ. ಆದ್ರೆ ಯೋಜನೆಗೆ ರೈತರ ಒಂದಿಂಚು ಭೂಮಿಯನ್ನೂ ವಶಪಡಿಸಿಕೊಳ್ಳಲ್ಲ. ನೂರಾರು ಎಕರೆ ಸರ್ಕಾರದ ಜಮೀನು ಇದೆ. ಒಂದು ವೇಳೆ ಅನಿವಾರ್ಯ ಬಂದಾಗ ಅಗತ್ಯ ಪರಿಹಾರ ನೀಡಿ ವಶಪಡಿಸಿಕೊಳ್ತೀವಿ ಎಂದು ಸಚಿವ ಸಿಎಸ್​ ಪುಟ್ಟರಾಜು ಹೇಳಿದ್ದಾರೆ.

ಜಿಲ್ಲೆಯ ಕೆರೆತೊಣ್ಣೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಅಭಿವೃದ್ದಿಗೆ ವಿರೋಧ ವ್ಯಕ್ತವಾಗಿರುವ ಕುರಿತು ಮಾತನಾಡಿದ ಅವರು, ಅಭಿವೃದ್ಧಿ-ವಿರೋಧಿಗಳಿಂದಲೇ ಮಂಡ್ಯ ಜಿಲ್ಲೆಗೆ ಕಳಂಕ. ಯಾವೊಂದು ಕೈಗಾರಿಕೆಗಳು ಮಂಡ್ಯಕ್ಕೆ ಬರ್ತಿಲ್ಲ. ಕಾವೇರಿ‌ ಮಾತೆಯ ಪುತ್ಥಳಿ‌ ನಿರ್ಮಾಣದಿಂದ ಕೆಆರ್‌ಎಸ್‌ಗೆ ಕಂಟಕವಿರೋದನ್ನ ತಜ್ಞರು ಹೇಳಬೇಕು. ಕೆಆರ್‌ಎಸ್ ಅಭಿವೃದ್ಧಿಯಾದರೆ ಸಾವಿರಾರು‌ ಜನರಿಗೆ ಉದ್ಯೋಗ ದೊರಕಲಿದೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv