‘ನಾವು ಜೆಡಿಎಸ್-ಕಾಂಗ್ರೆಸ್​ನವರನ್ನ ಮಲಗೋಕೆ ಬಿಡೋಲ್ಲ’

ಬಳ್ಳಾರಿ: ದಿನದ 24 ತಾಸು ನಾವು ನಿದ್ದೆ ಮಾಡದ ಹಾಗೇ ಜೆಡಿಎಸ್​​-ಕಾಂಗ್ರೆಸ್​​ ಪಕ್ಷಗಳನ್ನು ಕಾಯ್ತೇವೆ ಅಂತ ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಸವಾಲು ಹಾಕಿದ್ದಾರೆ. ಇಂದು ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು, ಜೆಡಿಎಸ್​-ಕಾಂಗ್ರೆಸ್​​ನಲ್ಲಿ ಮಂತ್ರಿಗಿರಿಗಾಗಿ ಒಳ‌ಜಗಳ ಆರಂಭವಾಗಿದೆ. ಎಚ್​ಡಿ ಕುಮಾರಸ್ವಾಮಿ ಅವರನ್ನು ಬೇಷರತ್ ಆಗಿ ಸಿಎಂ ಮಾಡಲು ಒಪ್ಪಿದ್ದಾರೆ. ಅವರ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಅವರ, ಅನಾಚಾರ, ಭ್ರಷ್ಟಾಚಾರ ಜನರ ಮುಂದೆ ಇಡುತ್ತೇವೆ. ದಿನದ 24 ತಾಸು ನಾವು ನಿದ್ದೆ ಮಾಡದ ಹಾಗೇ ಅವರನ್ನು ಕಾಯ್ತೇವೆ ಅಂತ ಹೇಳಿದ್ರು.
ನಿನ್ನೆ ಬಹುಮತದ ಸಮಯದಲ್ಲಿ ಬಿಜೆಪಿಗೆ 104 ಸ್ಥಾನ ಇದ್ದ ಕಾರಣ ಸೋತಿದ್ದೇವೆ. ಬಿಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು. ಕಳೆದ ಬಾರಿ 122 ಸ್ಥಾನ ಕಾಂಗ್ರೆಸ್ ಗೆದ್ದಿತ್ತು, ಜೆಡಿಎಸ್ 40 ಸ್ಥಾನ ಗಳಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಾವೆಲ್ಲಾ ಜೈಲಿಗೆ ಹೋಗ್ತೀವಿ ಎಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಅಂತ ವಾಗ್ದಾಳಿ ನಡೆಸಿದ್ರು.
ಎಚ್​​ಡಿಕೆಗೆ ಸಿಎಂ ಮಾಡಲು ಅನುಕೂಲ ಮಾಡಿದ್ದಾರೆ. 104 ಸ್ಥಾನ ನಮ್ಮದಿದೆ, ನಾವು ಕಾಂಗ್ರೆಸ್ ನವರನ್ನು ಮಲಗೋಕೆ ಬಿಡಲ್ಲ. ಅವರ ಭ್ರಷ್ಟಾಚಾರ, ಲೋಕಾಯುಕ್ತ ಹಲ್ಲು ಮುರಿದಿದ್ದು, ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ. ದಿನದ 24 ತಾಸು ಅವರನ್ನು ಕಾಯುತ್ತೇವೆ. ಈಗಾಗಲೇ ಅವರಲ್ಲಿ ಒಳ ಜಗಳ ಪ್ರಾರಂಭವಾಗಿದೆ ಅಂತ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv