‘ಎಷ್ಟಾದ್ರೂ ಕೇಸ್​ ಇರ್ಲಿ, ನಮಗೆ ಗೆಲ್ಲೋ ಅಭ್ಯರ್ಥಿ ಮುಖ್ಯ..!’

ಮಧ್ಯಪ್ರದೇಶ: ಚುನಾವಣಾ ಕಣದಲ್ಲಿರುವ ವ್ಯಕ್ತಿಯ ಎಕ್ಸ್​ ರೇ ನಮಗೆ ಬೇಕಾಗಿಲ್ಲ. ನಮಗೆ ಬೇಕಾಗಿರೋದು ಗೆಲುವು ಸಾಧಿಸುವ ಅಭ್ಯರ್ಥಿ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಯ ವಿರುದ್ಧ ನಾಲ್ಕು ಕೇಸ್​ಗಳು ಇದ್ದರೂ ಪರವಾಗಿಲ್ಲ ನಾವು ಅಡ್ಮೀಷನ್ ಮಾಡಿಕೊಳ್ಳುತ್ತೇವೆ ಅಂತಾ ಮಧ್ಯ ಪ್ರದೇಶದ ಕಾಂಗ್ರೆಸ್​ ಮುಖ್ಯಸ್ಥ ಕಮಲ್ ನಾಥ್ ಹೇಳಿಕೆ ಒಂದನ್ನ ನೀಡಿದ್ದಾರೆ. ಇದು ಭಾರೀ ಚರ್ಚೆಯನ್ನ ಹುಟ್ಟು ಹಾಕಿದೆ.

ದೇಶದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜಕೀಯ ನಾಯಕರ ಪ್ರಚಾರದ ಆರ್ಭಟ, ಮಾತುಗಳು ಎಲ್ಲೆ ಮೀರುತ್ತಿವೆ. ನಿನ್ನೆಯಷ್ಟೇ ಚತ್ತೀಸ್​ಗಡ್​ನಲ್ಲಿ ಚುನಾವಣೆ ಮುಗಿದಿದ್ದು, ಇದೀಗ ರಾಜಕೀಯ ಮುಖಂಡರ ಕಣ್ಣು ಮಧ್ಯಪ್ರದೇಶ ಮೇಲೆ ನೆಟ್ಟಿದೆ. ಏತನ್ಮಧ್ಯೆ ಮಧ್ಯ ಪ್ರದೇಶದ ಕಾಂಗ್ರೆಸ್​ ಮುಖ್ಯಸ್ಥ ಕಮಲ್ ನಾಥ್ ಅವರ ಈ ರೀತಿಯಾಗಿ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್​ ಪಕ್ಷ ಯಾವತ್ತೂ ಅಭ್ಯರ್ಥಿಗಳನ್ನ ಎಕ್ಸ್​​ ರೇ ನೋಡಿ ಆಯ್ಕೆ ಮಾಡಲ್ಲ. ಇದರಿಂದ ಯಾವುದೇ ಪ್ರಯೋಜನ ಆಗಲ್ಲ. ಕೆಲವು ಸಂಗತಿಗಳು ನಮ್ಮೊಂದಿಗೆ ಯಾವುದೇ ಕೆಲಸ ಮಾಡಲ್ಲ. ನಮ್ಮ ಕೆಲಸ ಯಾರು ಚುನಾವಣೆಯಲ್ಲಿ ವಿನ್ ಆಗುತ್ತಾರೆ ಅನ್ನೋದೇ ಮುಖ್ಯ. ಅಖಾಡದಲ್ಲಿರುವ ವ್ಯಕ್ತಿ ವಿರುದ್ಧ ನಾಲ್ಕು ಪ್ರಕರಣಗಳು ಇರಬಹುದು. ಐದು ಕೇಸ್​ಗಳಿದ್ದರೂ ಓಕೆ ಅನ್ನುತ್ತೇವೆ. ಆದರೆ ಬಿಜೆಪಿ ಯಾವತ್ತೂ ಹೀಗೆ ಹೆಳಲ್ಲ. ನಮಗೆ ಬೇಕಾಗಿರೋದು ವಿನ್ನಿಂಗ್ ಕ್ಯಾಂಡಿಡೇಟ್. ಯಾರಿಗೆ ಜಯಶಾಲಿ ಆಗುವ ಶಕ್ತಿ ಇರುತ್ತದೆಯೋ ಅವರು ವಿನ್ ಆಗುತ್ತಾರೆ. ಅಂಥವರಿಗೆ ಟಿಕೆಟ್ ನೀಡೋದು. ಇದು ನಮ್ಮ ಗುರಿ ಅಂತಾ ಹೇಳಿದ್ದಾರೆ.