‘ಸಮಾಜ ಸೇವೆಯಲ್ಲ, ರಾಜಕೀಯ ಮಾಡಲು ಬಂದಿದ್ದು’

ಶಿರಸಿ :ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಅದಕ್ಕೋಸ್ಕರನೇ ಶಾಸಕ, ಸಂಸದರಾಗಿದ್ದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಶಿರಸಿಯಲ್ಲಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಮಾಧ್ಯಮದವರು ಹೇಗೆ ಬರ್ಕೋತಿರೋ ಬರ್ಕೋಳ್ಳಿ. ಯಾರೋ ಕೇಳಬಹುದು ನೀವ್ ರಾಜಕಾರಣ ಮಾಡ್ತೀರಾ ಅಂತ. ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಅದಕ್ಕೋಸ್ಕರನೇ MLA, MP ಗಳಾಗಿದ್ದು. ಸಮಾಜ ಸೇವೆ ಮಾಡಲು ಈ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ. ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ಬರೋದಿಲ್ಲ. ನಾನು ರಾಜಕಾರಣಾನೇ ಮಾಡೋದು, ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಅವರು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv