ಸಾಮೂಹಿಕ ಶೌಚಾಲಯ ನಮಗೆ ಬೇಡ ಸ್ವಾಮಿ..!

ಬಾಗಲಕೋಟೆ: ಸಾಮೂಹಿಕ ಶೌಚಾಲಯ ಬೇಡವೆಂದು ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಪರ್ವತಿ ಗ್ರಾಮದಲ್ಲಿ‌ ನಡೆದಿದೆ.
2005-2006ನೇ ಸಾಲಿನಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಅವುಗಳಿಗೆ ಸಮರ್ಪಕವಾಗಿ ನೀರು ಒದಗಿಸುವಲ್ಲಿ ಪಂಚಾಯತಿ ವಿಫಲವಾಗಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಸರಿಯಾಗಿ ನಿರ್ವಹಣೆ ಮಾಡದ್ದಿದ್ದರಿಂದ ಶೌಚಾಲಯಗಳು ನಿರುಪಯೋಗ ಆಗಿವೆ ಅಂತಾ ಆರೋಪಿಸಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಡಿ ಅಂತಾ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಅವರ ಮನವಿಗೆ ಕಿವಿಗೊಡದ ಗ್ರಾಮ ಪಂಚಾಯತಿ ಕಾಮಗಾರಿ ಆರಂಭಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಪರ್ವತಿ ಗ್ರಾಮಸ್ಥರೆಲ್ಲಾ ಸೇರಿ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಇನ್ನು ಸ್ಥಳಕ್ಕೆ ಆಗಮಿಸಿದ ಗುಳೇದಗುಡ್ಡ ಪೊಲೀಸರು ಸಂಧಾನಕ್ಕೆ ಪ್ರಯತ್ನಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.com