ಸಚಿವ ಮಹೇಶ್ ರಾಜೀನಾಮೆ ವಿಚಾರಕ್ಕೂ ನಮಗೂ ಸಂಬಂಧವಿಲ್ಲ: ಬಿಎಸ್‌ವೈ

ಶಿವಮೊಗ್ಗ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಿದ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಆದ್ರೆ ಯಾವುದಾದರೂ ಒಂದು ಕಾರಣಕ್ಕೆ ಸರ್ಕಾರ ಬಿದ್ರೆ ಮುಂದೆ ನೋಡೋಣ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ ವೈಯಕ್ತಿಕವಾದದ್ದು. ಅವರ ರಾಜೀನಾಮೆಗೆ ವಿಶೇಷ ಕಾರಣ ಏನು ಅಂತಾ ಗೊತ್ತಿಲ್ಲ ಎಂದರು.
ಇನ್ನು, ಒಂದು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಮುಖಂಡರು ಹೇಳಬಾರದು. ನಾವು ಪ್ರತಿಪಕ್ಷ ಸ್ಥಾನದಲ್ಲಿ ಇದ್ದೇವೆ. ಪ್ರತಿಪಕ್ಷದ ಕೆಲಸ ಮಾಡೋಣ ಎಂದರು. ರಾಮನಗರ ಕ್ಷೇತ್ರಕ್ಕೆ ಕಾಂಗ್ರೆಸ್ -ಜೆಡಿಎಸ್​ನಿಂದ ಯಾರು ಅಭ್ಯರ್ಥಿಯಾಗ್ತಾರೆ ಅಂತ ನಾವು ಕಾಯ್ತಾ ಇಲ್ಲ. ಇಂದು ಸಂಜೆಯೊಳಗೆ ರಾಮನಗರದ ಅಭ್ಯರ್ಥಿ ಫೈನಲ್ ಆಗಲಿದೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv