ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಈಗಾಗಲೇ ನಮ್ಮ ಅವಧಿಯಲ್ಲಿ ಆದಂತಹ ಅಭಿವೃದ್ಧಿ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಗರಕ್ಕೆ ಐಐಟಿ, ಕಿಮ್ಸ್‌ ಪಕ್ಕದಲ್ಲೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತರಲಾಗಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಒಳ ಕ್ರೀಡಾಂಗಣ. ಹೋರ ಕ್ರೀಡಾಂಗಣಕ್ಕೆ ಅನುದಾನ ತರಲಾಗಿದೆ. ಅದರ ಕಾರ್ಯಗಳು ಕೂಡಾ ನಡೆಯುತ್ತಿವೆ. ಕೆಲವು ಕ್ರೀಡಾಂಗಣ ಈಗಾಗಲೇ ರೆಡಿಯಾಗಿವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಮನೆ ಮನೆಗೆ ಗ್ಯಾಸ್ ಪೈಪಲೈನ್ ಹಾಕಲಾಗುತ್ತಿದೆ. ಈಗಾಗಲೇ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಸುಮಾರು ₹ 5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಬೋರ್ಡ್‌ಗಳ ವಿತರಣೆ ಮಾಡಲಾಗಿದೆ. ಇದರಿಂದ ಶಾಲೆ ಕಲಿಕೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಅಭಿಪ್ರಾಯವನ್ನು ಸ್ವತಃ ಶಿಕ್ಷಕರೇ ಹಂಚಿಕೊಂಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯ ಪಟ್ಟರು.

ಹಲವು ಸಂಕಲ್ಪಗೊಳೊಂದಿಗೆ ನಾನು ಕಾರ್ಯ ನಿರ್ವಹಣೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ನಾನು ಅಂದುಕೊಂಡತ್ತೆ ಕೆಲವು ಕಾರ್ಯಗಳನ್ನು ಮುಗಿಸಿದ್ದೇನೆ. ಎಲ್ಲವನ್ನೂ ನಾನು ಈಡೇರಿಸಿದ್ದೇನೆ ಎಂದು ಅಹಂಕಾರದಿಂದ ಹೇಳುವುದಿಲ್ಲ. ದೇಶದ ಚುಕ್ಕಾಣಿ ಹಿಡಿಯುವುದು ಈಗ ನಾಯಕತ್ವ ತುಂಬಾ ಮುಖ್ಯವಾಗಿದೆ. ಈಗ ಅದೂ ನರೇಂದ್ರ ಮೋದಿಯವರಲ್ಲಿ ಕಾಣುತ್ತಿದ್ದೇವೆ. ಮಹದಾಯಿ ವಿಚಾರವನ್ನು ಲೋಕಸಭೆಯಲ್ಲಿ ಧ್ವನಿ ಎತ್ತಿದ್ದೆ ನಾನು. ಸುಮ್ಮನೆ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv