ಊರಿಗೆ ಇರೋದೊಂದೇ ಬಾವಿ.. ನೀರಿದ್ದರೂ ಬರೀ ಗಲೀಜು..! ಅಧಿಕಾರಿಗಳೇ ಕಣ್ಬಿಟ್ಟು ನೋಡಿ..

ಯಾದಗಿರಿ: ರಾಜ್ಯಾದ್ಯಂತ ವರುಣನ ಹವಾ ಜೋರಾಗಿದೆ. ಆದ್ರೆ ಯಾದಗಿರಿ ಜಿಲ್ಲೆ  ಸುರಪುರ ತಾಲೂಕಿನ ಜೋಗಂಡಭಾವಿ ಗ್ರಾಮದ ಜನರ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಹಲವು ವರ್ಷಗಳಿಂದ ಹನಿ ನೀರಿಗಾಗಿ ಹಾಹಾಕಾರ ಇದೆ. ಗ್ರಾಮದಲ್ಲಿರುವ ಎಲ್ಲಾ ಮನೆಗಳಿಗೂ ಕುಡಿಯುವ ನೀರಿಗೆ ಅಂತಾ ಇರೋದು ಒಂದೇ ಬಾವಿ. ಒಂದು ಬಾವಿ ಇದ್ದರೂ ಅದು ಕೂಡ ಸರಿ ಇಲ್ಲ. ಬಾವಿಯ ನೀರು ಹುಳು, ಕಪ್ಪೆ, ಜಿಡ್ಡು, ಗಲೀಜುಗಳಿಂದಲೇ ತುಂಬಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದ್ದರೂ ಇದುವರೆಗೂ ಶುದ್ಧಕುಡಿಯುವ ನೀರನ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಹೀಗಾಗಿ ಕೊಳಚೆ ನೀರನ್ನೇ ಕುಡಿದು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿ ಮಂಜುರಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ರೊಚ್ಚಿಗೆದ್ದಿರುವ ಗ್ರಾಮಸ್ಥರು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಜೋಗಂಡಭಾವಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv