ಚಾಮುಂಡಿ ಬೆಟ್ಟದಲ್ಲಿ ಜಲಪಾತ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಜಲಪಾತ ಜಲಲ ಜಲಪಾತ ಸೃಷ್ಟಿಯಾಗಿ ಜನ ಮನವನ್ನು ಪ್ರುಫುಲ್ಲಗೊಳಿಸಿದೆ.  ಮಲ್ಲಿಗೆ ನಗರ ಮೈಸೂರಿನಲ್ಲಿಂದು ಸುರಿದ ಧಾರಕಾರ ಮಳೆಗೆ ಜಲಧಾರೆ ಹರಿದು ಬಂದಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದೆ. ಇಂದು ಕೂಡ ಮಳೆ ಮುಂದುವರೆದಿದ್ದು, ಸುಮಾರು ಒಂದೆ ಗಂಟೆ ಕಾಲ ಸುರಿದ ಮಳೆ ನಿಂತ ಮೇಲೂ ಜುಳು ಜುಳು ನೀರು ಹರಿದು ಬಂದಿದೆ. ಚಾಮುಂಡಿ ಬೆಟ್ಟದ ಸಾವಿರ ಮಟ್ಟಿಲಿನಿಂದ ಗಂಗೆ ಧರೆಗೆ ಇಳಿದು ಬರುತ್ತಿದ್ದಾಳೆ ಎನ್ನುವಂತಿತ್ತು ದೃಶ್ಯ. ಇನ್ನು ಬೆಟ್ಟದ ಮೇಲಿಂದ ಮಳೆ ನೀರು ಜಲಪಾತವಾಗಿ ಹರಿದು ಬರುತ್ತಿರುವ ದೃಶ್ಯ ನೋಡುಗರ ಕಣ್ಣಿಗೆ ರಸದೌತಣ ನೀಡಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv