ಹುಷಾರ್​…ನೀವು ಬಳಸೋ ಪ್ಲಾಸ್ಟಿಕ್ ಬಾಟಲ್ ವಿಷ ಆಗಿರಬಹುದು.. ಚೆಕ್ ಮಾಡಿ..!

ಇತ್ತೀಚಿನ ದಿನಗಳಲ್ಲಿ ವಾಟರ್ ಬಾಟಲ್ ಅನ್ನು ಸಾಮಾನ್ಯವಾಗಿ ಎಲ್ಲಾ ಶಾಲೆಗಳ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ವಯೋಮಾನದವರೂ ಬಳಸ್ತಿದ್ದೀವಿ. ವಾಟರ್ ಬಾಟಲ್ ನೀರು ಕುಡೀತಿವಿ. ಆದ್ರೆ ಅದನ್ನ ಕೊಂಡುಕೊಳ್ತಾ ಏನು ಗಮನಿಸ್ತೀರಿ? ಅದರ ಕ್ವಾಲಿಟಿ? ಕಲರ್? ಪ್ಲಾಸ್ಟಿಕ್ ದಪ್ಪ-ತೆಳು? ಫುಡ್ ಗ್ರೇಡ್ ಹೌದಾ ಅಲ್ವಾ? ಅಂತೆಲ್ಲಾ ನೋಡಬೇಕು. ಎಲ್ಲಾ ಓಕೆ. ಆದ್ರೆ ತುಂಬಾ ಮುಖ್ಯವಾದ ಒಂದು ವಿಷಯಾನಾ ಮರೆತುಬಿಡ್ತೀವಿ? ಅದೇನು ಗೊತ್ತಾ?

ಪ್ಲಾಸ್ಟಿಕ್ ವಾಟರ್ ಬಾಟಲ್ ಗುಣಮಟ್ಟ ನೋಡೋಕೆ ಸಾಮಾನ್ಯವಾಗಿ ತಿಳಿಕೊಂಡಿರೋ ಈ ಮಾನದಂಡಗಳು ತಪ್ಪು. ನಾವು ನೀರು ಸಂಗ್ರಹಿಸಿಟ್ಟಕೊಳ್ಳೋ ವಾಟರ್ ಬಾಟಲ್ ತಳಭಾಗದಲ್ಲಿ 1 ರಿಂದ 7 ರವರೆಗೆ ಒಂದೊಂದು ಸಂಖ್ಯೆಯೂ ತ್ರಿಕೋನಾಕಾರದ ಒಳಗೆ ನಮೂದಾಗಿರುತ್ತದೆ. ಒಂದೊಂದು ಸಂಖ್ಯೆಯೂ ಒಂದೊಂದು ಪ್ಲಾಸ್ಟಿಕ್ ಕ್ವಾಲಿಟಿಯನ್ನ ತಿಳಿಸುತ್ತೆ! ಆದ್ರೆ ಇದ್ರಲ್ಲಿ ಕುಡಿಯೋ ನೀರನ್ನ ಸಂಗ್ರಹಿಸಿಡೋಕೆ ಯೋಗ್ಯವಾಗಿರೋದು 1 ಸಂಖ್ಯೆಯಿರೋ ವಾಟರ್ ಬಾಟಲ್ ಮಾತ್ರ! ಆದ್ರೆ ಸಾಕಷ್ಟು ಮಂದಿಗೆ ಇದು ತಿಳಿದಿಲ್ಲ..
ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಕಡಿಮೆ. ಈ ಬಗ್ಗೆ ಫಸ್ಟ್ ನ್ಯೂಸ್ ನೊಂದಿಗೆ ಮಾತನಾಡಿದ ಆಹಾರ ತಜ್ಞರಾದ ಕೆಸಿ ರಘು ಈ ಬಗ್ಗೆ ಹೀಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಪ್ಲಾಸ್ಟಿಕ್ ವಾಟರ್ ಬಾಟಲ್ ಕೊಳ್ಳುವಾಗ ಈ ಕೆಳಗಿನ ಅಂಶಗಳನ್ನ ಮರೆಯದೇ ಗಮನವಹಿಸಿ.

ಹಾಗೇ ಲೇಬಲ್ ಇಲ್ಲದಿದ್ದರೂ ಅಥವಾ PC ಎಂದು ಬರೆದಿದ್ದರೆ ಅದು ಬಹಳ ಅಪಾಯಕಾರಿ. ಇದರಿಂದ ತಯಾರಿಸಲಾದ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದು ಅತ್ಯಂತ ಅಪಾಯಕರ. ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ರೂ ಪ್ಲಾಸ್ಟಿಕ್ ಬಾಟಲ್ ಗಳಿಂದ ಆರೋಗ್ಯಕ್ಕೆ ಸಮಸ್ಯೆಯಾಯ್ತು ಅಂತಾ ನೀವು ಕಾನೂನು ಹೋರಾಟಕ್ಕೆ ಮುಂದಾದ್ರೆ ಅದಕ್ಕೆ ಪೂರಕವಾದ ಕಾನೂನು ನಮ್ಮ ದೇಶದಲ್ಲಿ ಇನ್ನೂ ಇಲ್ಲದಿರೋದೆ ದುರಂತ. ಹಾಗಂತ ಎಲ್ಲಾ ಸಮಯದಲ್ಲೂ ಪ್ಲಾಸ್ಟಿಕ್ ನಿಂದಾದ ವಸ್ತುಗಳನ್ನ ಬಳಸದೇನೆ ಇರೋದು ಕಷ್ಟಸಾಧ್ಯವೇ? ಹೀಗಾಗಿ ಇರೋದ್ರಲ್ಲಿಯೇ, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸೂಕ್ತ.
– ಐಶ್ವರ್ಯ, ಫಸ್ಟ್ ನ್ಯೂಸ್

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv