ಪೆಪ್ಪಿ ವಿಡಿಯೋಸ್​ ನೋಡ್ತಾ ಇರಿ.. ನಗ್ತಾ ಇರಿ & ಹೆಲ್ದಿಯಾಗಿರಿ..!

ಮ್ಯೂಸಿಕ್​ ಅಂದರೆ ಎಲ್ಲಾರಿಗೂ ತುಂಬಾ ಇಷ್ಟ. ಎಷ್ಟೋ ಜನರಿಗೆ ಮ್ಯೂಸಿಕ್​ ಒಂಥರಾ ಸ್ಟ್ರೆಸ್​ ಬಸ್ಟರ್​ ಇದ್ದಂಗೆ. ಅದಕ್ಕಾಗೆ ಕೆಲವರು ಜೋರಾಗಿ ಸೌಂಡ್​ ಕೊಟ್ಟು ಮ್ಯೂಸಿಕ್​ ಕೇಳಿಕೊಂಡು ತಮ್ಮ ಕೆಲಸವನ್ನ ತಮ್ಮ ಪಾಡಿಗೆ ಮಾಡ್ತಾರೆ. ಅದಕ್ಕಾಗೆ ಅದಷ್ಟೋ ಜನ ಮ್ಯೂಸಿಕ್​ ಌಪ್​ಗಳ ಮೊರೆ ಹೋಗ್ತಾರೆ. ಇಲ್ಲ ಅಂದ್ರೆ, ಯೂಟ್ಯೂಬ್​ನಲ್ಲಿ ಪೆಪ್ಪಿ ವಿಡಿಯೋಸ್​ ನೋಡ್ತಾರೆ.

ಪೆಪ್ಪಿ ವಿಡಿಯೋಸ್​ ಅಂದ್ರೇ ಏನು..?
ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ, ಕ್ಯೂಟ್ ಕ್ಯೂಟ್​ ಮಕ್ಕಳು ನಗ್ತಾ ನಗ್ತಾ, ಆಟ್ತಾಯಿರೋ ಒಂದಿಷ್ಟು ವಿಡಿಯೋಸ್​ನ ನೋಡಿರ್ತಿರಾ ಅಲ್ವಾ. ಒಂದು ವೀಡಿಯೋವನ್ನ ನೋಡಿ ಮನ ಬಿಚ್ಚಿ ನಗಿಸೋದೆ ಪೆಪ್ಪಿ ವಿಡಿಯೋ.

ಪೆಪ್ಪಿ ವಿಡಿಯೋಸ್​ ನೋಡಿ ಒಮ್ಮೆ ನಗಿ..!
ಹೆಚ್ಚು ಕಾಲ ಕೆಲಸ ಮಾಡಿ, ಕೆಲಸದ ನಂತರ ಈ ಪೆಪ್ಪಿ ವೀಡಿಯೋಗಳನ್ನ ನೋಡೋದ್ರಿಂದ ಮನಸ್ಸಿಗೆ ಏನೋ ಒಂದು ಸಮಾಧಾನ ಸಿಗುತ್ತಂತೆ. ಇನ್ನು ಪಾಸಿಟಿವ್​ ಟೋನ್​ಗಳಲ್ಲಿರುವ ವಿಡಿಯೋಗಳನ್ನ ನೋಡಿದ್ರೆ ಜನರಲ್ಲಿ ಪಾಸಿಟಿವ್​ ಫೀಲಿಂಗ್​ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೇ ಈ ವೀಡಿಯೋಗಳನ್ನ ಹೆಚ್ಚು ನೋಡುವವರು ಪಾಸಿಟಿವ್​ ಆಗಿ ಪ್ರತಿಕ್ರಿಯಿಸುತ್ತಾರೆ ಎಂದು  ಸಾಮಾಜಿಕ ಮನೋವೈಜ್ಞಾನಿಕ ಮತ್ತು ವ್ಯಕ್ತಿತ್ವ ವಿಜ್ಞಾನದ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನವೊಂದು ಪ್ರಕಟಿಸಿದೆ. ಇನ್ನು ಈ ಪೆಪ್​ ವಿಡಿಯೋಗಳು ಜನರ ಭಾವನೆಗಳ ಮೇಲೆ ಹೆಚ್ಚು ಧನಾತ್ಮಕ ಪರಿಣಾಮವನ್ನ ಬೀರುವುದರ ಜೊತೆಗೆ ಅವರನ್ನ ಹೆಚ್ಚು ಸಂತೋಷದಿಂದಿಡುತ್ತದೆ. ಈ ಪೆಪ್​ ವಿಡಿಯೋಗಳು ಭಾವನೆಗಳಿಗೆ ಹಿಡಿದ ಕೈಗನ್ನಡಿ ಎಂದು ಟಿಲ್ಬರ್ಗ್ ವಿಶ್ವವಿದ್ಯಾಲಯದ ಹ್ಯಾನೆಸ್ ರೊಸೆನ್​ಬಸ್ಚ್​ ಹೇಳಿದ್ದಾರೆ.  ಸೋ ದಿನಕ್ಕೊಂದು ವಿಡಿಯೋ ನೋಡಿದ್ರೇ ನಿಮಗೆ ಯಾವುದೇ ಕಾಯಿಲೆ ಬರೋದಿಲ್ಲ. Just Smile And Stay Fit..!

பாட்டிய வெச்சு TikTok பன்றீங்கல்ல?பிரமாதம்…👌 👍 🎙️🎶🎧📲📱

Posted by Tamil Musical.ly on Friday, January 4, 2019

ವಿಷೇಶ ಬರಹ: ಶೃತಿ