ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ ಕೊಡಬೇಡಿ ಅಂದಿದ್ಯಾಕೆ ವಾಸೀಂ ಅಕ್ರಮ್..?

ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್, ಸಿಡಿದೆದ್ದಿದ್ದಾರೆ. ಇತ್ತೀಚಿಗಷ್ಟೆ ಪಾಕಿಸ್ತಾನ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡಿ, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆಸಿಸ್ ವಿರುದ್ಧ ಪಾಕ್ ಹೀನಾಯ ಸೋಲಿನ ಬೆನ್ನಲೆ ಆಟಗಾರರ ಫಿಟ್ನೆಸ್ ಬಗ್ಗೆ ಪ್ರಶ್ನಿಸಿರೋ ಅಕ್ರಂ, ಪಾಕ್ ಕ್ರಿಕೆಟ್ ಮ್ಯಾನೇಜ್ಮೆಂಟ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಏಕದಿನ ವಿಶ್ವಕಪ್​ಗೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಪಿಸಿಬಿ, ಆಟಗಾರರ ಫಿಟ್ನೆಸ್ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಆಟಗಾರರಿಗೆ ಬಿರಿಯಾನಿ ಬಡೆಸುತ್ತಾ, ಅವರ ಫಿಟ್ನೆಸ್ ಲೆವೆಲ್ ಕಾಯ್ದುಕೊಳ್ಳದಂತೆ ಮಾಡುತ್ತಿದೆ. ಹೀಗೆ  ಆಟಗಾರರು ಅನ್​ಫಿಟ್ ಇದ್ದು, ಚಾಂಪಿಯನ್ ತಂಡಗಳ ವಿರುದ್ಧ ಹೇಗೆ ಸ್ಪರ್ಧೆ ಮಾಡೋಕೆ ಸಾಧ್ಯ ಅಂತ, ವಾಸೀಂ ಅಕ್ರಂ ಪ್ರಶ್ನಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstn