ಅಕ್ಕನನ್ನು ಏಕೆ ಚುಡಾಯಿಸ್ತಿಯ ಎಂದು ಪ್ರಶ್ನಿಸಿದ್ದಕ್ಕೆ ಕೊಲೆಯಾದನಾ ಬಾಲಕ?

ಕಲಬುರ್ಗಿ: ಜೂನ್ 30ರಂದುಜಿಲ್ಲೆಯ ಅಫಜಲಪುರ ಪಟ್ಟಣದ ಹೊರವಲಯದಲ್ಲಿ 12 ವರ್ಷದ ಬಾಲಕ ರಾಜಶೇಖರ್ ಹೊನ್ನಳ್ಳಿ ಕೊಲೆ ಪ್ರಕರಣ ಸಂಬಂಧ ಪೊಲೀಸರು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಫಜಲಪುರ ನಿವಾಸಿಗಳಾದ ಅನಿಲ್ ಭಂಗಿ, ಸಂಜೀವ್​​ ವೆಗ್ಗಿ, ಮಲ್ಲು ಇಂಗಳಗಿ, ಪಚ್ಚು ಒಡೆಯರ್, ಮಲ್ಲಿನಾಥ ಗುಳೇದ್, ಬಸವರಾಜ್ ಕಂಡೋಳಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಮೃತ ಬಾಲಕನ ತಾಯಿ ವೈಶಾಲಿ ನೀಡಿರುವ ದೂರಿನ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ಕನ ಚುಡಾಯಿಸಿದ್ದನ್ನು ಮನೆಯಲ್ಲಿ ಹೇಳುತ್ತೇನೆ ಎಂದಿದ್ದಕ್ಕೆ ರಾಜಶೇಖರ್​​​​ನನ್ನು ಕೊಲೆ ಮಾಡಿದ್ದಾಗಿ ತಾಯಿ ಆರೋಪಿಸಿದ್ದಾಳೆ. ಬಾಳೆ ಹಣ್ಣಿನ ವ್ಯಾಪಾರಿಯಾಗಿರುವ ವೈಶಾಲಿ, ಮಗ ರಾಜಶೇಖರ್​​​ನನ್ನು ಜೂನ್ 30ರಂದು ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು ಎನ್ನಲಾಗಿದೆ. ಬಳಿಕ ಅಫಜಲಪುರ ಪಟ್ಟಣದ ಹೊರವಲಯದಲ್ಲಿ ಬಾಲಕ ರಾಜಶೇಖರ್​​​​​ನಶವ ಪತ್ತೆಯಾಗಿತ್ತು.

ಬಾಲಕನ ಅಕ್ಕನನ್ನು ಈ ಹಿಂದೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅನಿಲ್ ಭಂಗಿ ಎಂಬಾತ ಚುಡಾಯಿಸುತ್ತಿದ್ದನಂತೆ. ಇದನ್ನು ಪ್ರಶ್ನಿಸಿದ ರಾಜಶೇಖರ್​​​​ನಿಗೆ ಆರೋಪಿ ಅನಿಲ್ ಭಂಗಿ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಇದಾದ ಕೆಲ ವರ್ಷಗಳ ಬಳಿಕ ಅಕ್ಕಳನ್ನು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮೂಲದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಹೆರಿಗೆಗೆಂದು ರಾಜಶೇಖರ ಅಕ್ಕ ಅಫಜಲಪುರಕ್ಕೆ ಬಂದಿದ್ದಳು. ತಮ್ಮ ಕೊಲೆಯಾದ ದಿನ ಬಹಿರ್ದೆಸೆಗೆ ಹೋಗುವುದಕ್ಕಾಗಿ ತನ್ನ ಜೊತೆ ಕರೆದೊಯ್ದಿದ್ದಳು. ಈ ವೇಳೆಯೂ ಅನಿಲ್ ರಾಜಶೇಖರ ಅವರ ಅಕ್ಕಳನ್ನು ಚುಡಾಯಿಸಿದ್ದಾನೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದ ಬಾಲಕ ರಾಜಶೇಖರ, ಮನೆಯಲ್ಲಿ ಹೇಳುತ್ತೇನೆಂದು ಹೇಳಿದ್ದನಂತೆ. ಆರೋಪಿ ಅನಿಲ್​​​​ನಿಂದ ಈ ವಿಷಯ ತಿಳಿದ ಸಂಜೀವ್ ಹೆಗ್ಗಿ, ಮಳ್ಳು ಗುಳೇದ್ ಬಾಲಕ ರಾಜಶೇಖರ್​​​​ನನ್ನು ಕರೆದೊಯ್ದು ಹತ್ಯೆ ಮಾಡಿದ್ದಾಗಿ ಮೃತ ರಾಜಶೇಖರ್​​​​ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv