ಗೊಡೆ ಒಡೆದ್ರು, ನೆಲ ಬಗೆದ್ರು, ಟೆಬಲ್ ಎತ್ತಿದ್ರು ಕೊನೆಗೂ ಅವನನ್ನ ಹಿಡಿದೇ ಬಿಟ್ರು..!

ಚಿಕ್ಕಮಗಳೂರು: ಅತಿ ವಿಷಯುಕ್ತವಾದ ಕೊಳಕಮಂಡಲ ಮರಿ ಹಾವೊಂದು ನಗರಸಭೆ ಕಚೇರಿಗೆ ಬಂದು ಅಧಿಕಾರಿಗಳನ್ನ ತಲ್ಲಣಗೊಳಿಸಿರೋ ಘಟನೆ ಕಾಫಿನಾಡಿನಲ್ಲಿ ನಡೆದಿದೆ.
ಅಧಿಕಾರಿಗಳು ಎಂದಿನಂತೆ ಬೆಳಗ್ಗೆ ಕೆಲಸ ಆರಂಭಿಸಿದ್ರು. ಆದ್ರೆ, ಕಂಪ್ಯೂಟರ್​ನಲ್ಲಿ ಮಾನಿಟರ್ ಮೇಲಿಂದ ಕೆಳಗೆ ಇಳಿದ ಹಾವನ್ನ ಕಂಡು ಕಂಪ್ಯೂಟರ್ ಆಪರೇಟರ್​​ಗಳು ಕೂಗಿಕೊಂಡು ಹೊರಗೆ ಓಡಿ ಬಂದಿದ್ರು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನ ಹಿಡಿದಿದ್ದಾರೆ. ಆದ್ರೆ, ಹಾವು ಅತೀ ಸಣ್ಣದಾಗಿದ್ದ ಪರಿಣಾಮ ಕಚೇರಿಯೊಳಗೆ ಟೇಬಲ್‍ಗಳ ಸಂದಿಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹರಿದಾಡುತ್ತಿತ್ತು. ಹಾಗಾಗಿ ಹಾವು ಹಿಡಿಯಲು ಕಚೇರಿಯ ಕಡತಗಳು ಹಾಗೂ ಕಂಪ್ಯೂಟರ್​ಗಳನ್ನ ಒಂದೆಡೆ ತೆಗೆದಿಟ್ಟು, ಅಲ್ಲಿಂದ ಟೇಬಲ್‍ಗಳನ್ನ ಹೊರಗಿಟ್ರು. ಇಷ್ಟಾದ್ರೂ ಸ್ನೇಕ್ ಸಿಗಲಿಲ್ಲ. ಆಗ ನಗರಸಭೆ ಸಿಬ್ಬಂದಿ ಗೋಡೆ ಒಡೆದು, ಟೇಬಲ್‍ಗಳನ್ನ ಹೊರಗಿಟ್ಟು ಹಾರೆಯಲ್ಲಿ ನೆಲ ಹಾಗೂ ಗೋಡೆಗೆ ಫಿಕ್ಸ್ ಮಾಡಿದ್ದ ಟೇಬಲ್‍ನ ಮೀಟಿ ಸ್ನೇಕ್ ನರೇಶ್‍ಗೆ ಅನುವು ಮಾಡಿಕೊಟ್ರು. ಇಷ್ಟೆಲ್ಲಾ ಸರ್ಕಸ್​ ಮಾಡಿದ ಬಳಿಕ ನರೇಶ್​ ಸ್ನೇಕ್​ ಹಿಡಿದ್ರು. ಇದರಿಂದಾಗಿ ನಗರಸಭೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv