ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 36.31ರಷ್ಟು ಮತದಾನ

ಬೆಂಗಳೂರು: ದೇಶದಾದ್ಯಂತ ಇಂದು ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಾಗೇ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾರರು ಬೂತ್​ಗಳತ್ತ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ. 7.38ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ. 14.37ರಷ್ಟು ಮತದಾನವಾಗಿತ್ತು , ಮಧ್ಯಾಹ್ನ 12 ಗಂಟೆವರೆಗೆ ಶೇ. 22.22 ಮತದಾನವಾಗಿತ್ತು. ಇದೀಗ 1 ಗಂಟೆವರೆಗೆ ಶೇಕಡಾ 36.31 ರಷ್ಟು ಮತದಾನ ನಡೆದಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 1 ಗಂಟೆಯ ಅಂಕಿಅಂಶದ ಪ್ರಕಾರ ಶಿವಮೊಗ್ಗದಲ್ಲಿ ಅತೀ ಹೆಚ್ಚು(ಶೇ.41.66ರಷ್ಟು) ಮತದಾನವಾಗಿದ್ದರೆ, ಕಲಬುರ್ಗಿಯಲ್ಲಿ ಅತೀ ಕಡಿಮೆ(ಶೇ.30.48 ರಷ್ಟು)  ಮತದಾನವಾಗಿದೆ.

ಮಧ್ಯಾಹ್ನ 1 ಗಂಟೆವರೆಗೆ ಶೇ. 36.31 ರಷ್ಟು ಮತದಾನ
ಚಿಕ್ಕೋಡಿ: ಶೇ.39.28
ಬೆಳಗಾವಿ: ಶೇ.35.02
ಬಾಗಲಕೋಟೆ: ಶೇ.38.33
ಬೀದರ್: ಶೇ.33.14
ವಿಜಯಪುರ: ಶೇ.33.14
ಕಲಬುರ್ಗಿ: ಶೇ.30.48
ರಾಯಚೂರು: ಶೇ. 33.69
ಬಳ್ಳಾರಿ: ಶೇ.40.17
ಕೊಪ್ಪಳ: ಶೇ.39.43
ಹಾವೇರಿ: ಶೇ.32.79
ಧಾರವಾಡ: ಶೇ.35.65
ಉತ್ತರ ಕನ್ನಡ: ಶೇ39.87
ದಾವಣಗೆರೆ: ಶೇ.37.39
ಶಿವಮೊಗ್ಗ: ಶೇ.41.66


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv