ಮತಗಟ್ಟೆಯನ್ನ ಮದುವೆ ಮನೆಯಂತೆ ಶೃಂಗರಿಸಿದ ಸ್ಥಳೀಯರು

ಮೈಸೂರು: ಲೋಕಸಭಾ ಚುನಾವಣೆಗೆ ಇಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ. ಮತದಾರರು ಮತಗಟ್ಟೆ ಬಳಿ‌ ಪ್ರಜಾಪ್ರಭುತ್ವದ‌ ಹಬ್ಬವನ್ನ ಆಚರಿಸುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವೇಶ್ವರ ನಗರದ ಮಹರ್ಷಿ ವಿದ್ಯಾ ಸಂಸ್ಥೆಯ ಮತಗಟ್ಟೆ ಬಳಿ ಸಂಭ್ರಮದ ವಾತಾವರಣ ಕಂಡುಬಂತು. ಮತದಾನ ಕೇಂದ್ರದ ದ್ವಾರದ ಬಳಿ ಬಾಳೆ ಕಂಬ ನೆಟ್ಟು, ರಂಗೋಲಿ ಬಿಡಿಸಿ ಪ್ರಜಾಪ್ರಭುತ್ವವದ ಹಬ್ಬಕ್ಕೆ ಸ್ವಾಗತವೆಂಬ ಕಮಾನು ನಿರ್ಮಾಣ ಮಾಡಿದ್ದಾರೆ. ಸ್ಥಳೀಯರು ಮತದಾರರನ್ನು ವಿಶೇಷವಾಗಿ ಸ್ವಾಗತಿಸಲು ಮತಗಟ್ಟೆಯನ್ನು ಮದುವೆ ಮನೆಯಂತೆ ಸಿಂಗರಿಸಿ ಸಂಭ್ರಮಿಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv