ವಿಧಾನ ಪರಿಷತ್​​ ಚುನಾವಣೆ: ಹಕ್ಕು ಚಲಾಯಿಸ್ತಿರುವ ಮತದಾರರು

ಕಲಬುರ್ಗಿ: ವಿಧಾನ ಪರಿಷತ್​​​​ನ ಈಶಾನ್ಯ ಪದವೀಧರ ಕ್ಷೇತ್ರದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಾರಂಭವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು 23,145 ಪದವೀಧರ ಮತದಾರರಿದ್ದಾರೆ. ಜಿಲ್ಲೆಯಾದ್ಯಂತ 46 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಮತದಾನ ಹಿನ್ನೆಲೆಯಲ್ಲಿ‌‌ ಇಂದು ಪದವಿಧರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ನೀಡಲಾಗಿದೆ. ಪದವೀಧರ‌ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈಶಾನ್ಯ ಕ್ಷೇತ್ರದಲ್ಲಿ ಒಟ್ಟು 82,054 ಪದವೀಧರ ಮತದಾರರಿದ್ದಾರೆ. ಹೈದರಾಬಾದ್ ‌ಕರ್ನಾಟಕ‌ ಭಾಗದ ಆರು ಜಿಲ್ಲೆಗಳು ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಒಳಗೊಂಡ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 157 ಮತಗಟ್ಟೆ ಸ್ಥಾಪಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv