ಹಕ್ಕು ಚಲಾಯಿಸಿದ ಸೋಮಶೇಖರ ರೆಡ್ಡಿ

ಬಳ್ಳಾರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಕಡಿಮೆಯಾಗುತ್ತಿದ್ದಂತೆ, ಮೇಲ್ಮನೆ ಚುನಾವಣೆ ಕಾವು ಜೋರಾಗಿದೆ. ಕರ್ನಾಟಕದ ದೊಡ್ಡ ವಿಧಾನ ಪರಿಷತ್​ ಕ್ಷೇತ್ರವಾದ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಬಳ್ಳಾರಿಯ ಸರಳಾದೇವಿ ಕಾಲೇಜ್​​​​​ನ ಬೂತ್ ನಂ.116 ರಲ್ಲಿ ಮತದಾನ ಪ್ರಾರಂಭವಾಗಿದೆ. ಹುಮ್ಮಸ್ಸಿನಿಂದ ಬಂದು ಪದವೀಧರರು ಮತದಾನ ಮಾಡುತ್ತಿದ್ದಾರೆ. ಶಾಸಕ ಸೋಮಶೇಖರ ರೆಡ್ಡಿ ಬಳ್ಳಾರಿಯ ತಹಶೀಲ್ದಾರ್​​ ಕಚೇರಿ ಆವರಣದಲ್ಲಿಯ ಕೇಂದ್ರದಲ್ಲಿ ಮತದಾನ ಮಾಡಿದರು. ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ಮತದಾನ ಮಾಡಿದರು. ಈ ಕ್ಷೇತ್ರವು ಹೈದ್ರಾಬಾದ್​ ಕರ್ನಾಟಕ ಪ್ರದೇಶಗಳನ್ನು ಒಳಗೊಂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv