ನನಗೆ ವೋಟ್​ ಹಾಕದಿದ್ರೆ ಶಾಪ ಕೊಡ್ತೀನಿ: ಸಾಕ್ಷಿ ಮಹಾರಾಜ್​ .!

ಉನ್ನಾವೋ: ನಾನು ಸನ್ಯಾಸಿ, ನೀವು ನನಗೆ ವೋಟ್ ಹಾಕದಿದ್ದರೆ ನಾನು ನಿಮಗೆ ಶಾಪ ಕೊಡ್ತೀನಿ ಅಂತ ಉತ್ತರಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ಹೇಳೋ ಮೂಲಕ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಉನ್ನಾವೋದಲ್ಲಿ ನಡೆದ ಸಮಾವೇಶವೊಂದರಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಾಕ್ಷಿ ಮಹಾರಾಜ್, ನಾನೊಬ್ಬ ಸ್ವಾಮೀಜಿ, ಸನ್ಯಾಸಿ ಏನೇ ಕೇಳಿದರೂ ಅದನ್ನ ನೀಡಬೇಕು ಅಂತ ಶಾಸ್ತ್ರದಲ್ಲಿಯೇ ಬರೆದಿದೆ. ನಾನೇನು ಮತದಾರರಿಂದ ಆಸ್ತಿ ಕೇಳುತ್ತಿಲ್ಲ. 125 ಕೋಟಿ ಜನರ ಹಣೆಬರಹ ಬರೆಯಲು ಮತ ಕೇಳುತ್ತಿದ್ದೇನೆ ಅಂತ ಹೇಳಿದ್ದಾರೆ.

ಸದಾ ವಿವಾದವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದಿರುವ ಸಾಕ್ಷಿ ಮಹಾರಾಜ್​ ಈಗ ಮತ್ತೊಂದು ಹೇಳಿಕೆಯಿಂದ ಹಲವರ ಬಾಯಿಗೆ ಎಲೆ-ಅಡಿಕೆ ಆಗಿ ಹೋಗಿದ್ದಾರೆ. ಇನ್ನು, 2019ರ ನಂತರ ಮೋದಿ ಸುನಾಮಿಯಿಂದಾಗಿ ಯಾವುದೇ ಚುನಾವಣೆಗಳನ್ನ ನಡೆಸುವ ಅಗತ್ಯವೇ ಬರೋದಿಲ್ಲ ಅಂತ ಹೇಳಿದ್ದ ಸಾಕ್ಷಿ ಮಹಾರಾಜ್​ ವಿರುದ್ಧ ಹಲವರು ಟ್ರೋಲ್ ಬಾಣಗಳನ್ನ ಬಿಟ್ಟಿದ್ದರು