ಮತ ಎಣಿಕೆ ವೇಳೆ ಪಾರ್ಟಿ ಏಜೆಂಟ್- ಚುನಾವಣಾಧಿಕಾರಿಗಳ ನಡುವೆ ವಾಗ್ವಾದ..!

ಕಲಬುರ್ಗಿ: ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ವೇಳೆ ಗದ್ದಲ ಉಂಟಾಗಿದೆ. ಚುನಾವಣಾಧಿಕಾರಿಗಳು ಮತ್ತು ಪಕ್ಷಗಳ ಏಜೆಂಟರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗುಲ್ಬರ್ಗಾ ವಿವಿಯಲ್ಲಿ ಮತ ಎಣಿಕೆ ಕೇಂದ್ರದ ಮತಗಟ್ಟೆ ಸಂಖ್ಯೆ 48ರಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗ್ತಿದೆ. ಮೊದಲು 460 ಮತಗಳು ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದರು. ಆದ್ರೆ ಮತ ಎಣಿಕೆ ವೇಳೆ 510 ಮತಗಳು ಮತಪೆಟ್ಟಿಗೆಗಳಿವೆ ಎಂದು ಹೇಳಿಕೆ ನಿಡಿದ್ದಾರೆ. ಇದ್ರಿಂದ ಕೆಲವೇ ಹೊತ್ತಿನಲ್ಲಿ 50 ಮತಗಳು‌ ಹೆಚ್ಚಾಗಿದ್ದು ಹೇಗೆ ಎಂದು ಏಜೆಂಟರು ಪ್ರಶ್ನಿಸಿದ್ದಾರೆ. ಈ ಮಧ್ಯೆ ಚುನಾವಣಾಧಿಕಾರಿ ಮತ್ತು ಏಜೆಂಟರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಪರಿಣಾಮ, ಕೆಲಕಾಲ ಮತ ಎಣಿಕೆ ಕೇಂದ್ರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಮತಪೆಟ್ಟಿಗೆಯಲ್ಲಿರುವ ಎಲ್ಲಾ ಮತಗಳನ್ನು ಪರಿಗಣಿಸಲಾಗುವುದು ಅಂತಾ ಚುನಾವಣಾಧಿಕಾರಿ ಪಂಕಜಕುಮಾರ್ ಪಾಂಡೆ ಸ್ಪಷ್ಟನೆ ನೀಡಿದ್ದು ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ.

ಮತ ಎಣಿಕೆ ಆರಂಭ
ಈವರೆಗೂ ಮತಪತ್ರಗಳ ಬಂಡಲ್ ಮಾಡುವಲ್ಲಿ ನಿರತರಾಗಿದ್ದ ಅಧಿಕಾರಿಗಳು. ಈಗ ಮತ ಎಣಿಕೆ ಆರಂಭಿಸಿದ್ದಾರೆ. ಒಟ್ಟು 14 ಟೇಬಲ್​ಗಳಲ್ಲಿ‌ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಮೊದಲನೇ ಸುತ್ತಿನಲ್ಲಿ ಪ್ರತಿ ಟೇಬಲ್​ಗೆ 1000 ಮತಪತ್ರಗಳ ಹಂಚಿಕೆ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv