ಡಿ.ಕೆ. ಶಿವಕುಮಾರ್ ಅಸ್ವಸ್ಥ, ಮನೆಯಲ್ಲೇ ಚಿಕಿತ್ಸೆ

ರಾಮನಗರ: ಕನಕಪುರದ ತಮ್ಮ ಮನೆಯಲ್ಲಿ ತಂಗಿರುವ ಸಚಿವ ಡಿ.ಕೆ. ಶಿವಕುಮಾರ್​ ಇಂದು ಬೆಳಗ್ಗೆ ವಾಂತಿ ಮಾಡಿಕೊಂಡಿದ್ದು, ತೀವ್ರವಾಗಿ ಬಳಲಿದಂತೆ ಕಂಡುಬಂದಿದ್ದಾರೆ. ತೀವ್ರ ಅಸ್ವಸ್ಥತೆ ಕಾರಣದಿಂದಾಗಿ ವೈದ್ಯರನ್ನ ಕರೆಸಿ, ಮನೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ.

ಹೈದರಾಬಾದ್​ನಿಂದ ವಿಮಾನದಲ್ಲಿ ಬರುವಾಗ ಉಪಹಾರ ಸೇವಿಸಿದ್ದರು. ಅಲ್ಲಿ ಸೇವಿಸಿದ ಉಪಹಾರ ಫುಡ್ ಪಾಯಿಸನ್ ಆಗಿರಬಹುದು. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಮನೆಯಲ್ಲೇ ಚಿಕಿತ್ಸೆ ಪಡೆದು, ರೆಸ್ಟ್ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಮರಸಪ್ಪ ರವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv