ವೋಟಿಂಗ್ ಮಷಿನ್‌ ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ..!

ಮೈಸೂರು: ಇವಿಎಂ ಯಂತ್ರ ಸಾಗಿಸುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರಿನ ಗೌಸಿಯಾ ನಗರದಲ್ಲಿ ನಡೆದಿದೆ. ಗೌರಿಶಂಕರ ನಗರ ಸರ್ಕಾರಿ ಶಾಲೆಯ ಮತಯಂತ್ರವನ್ನು KA 09 F -3650 ನೊಂದಣಿಯ ನಗರ ಸಾರಿಗೆ ಬಸ್​ನಲ್ಲಿ ಸಾಗಿಸಲಾಗ್ತಿತ್ತು. ಈ ವೇಳೆ ಬಸ್ಸಿನ ವೈರ್​​​ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ, ಕೆಲಹೊತ್ತು ಆತಂಕ ಸೃಷ್ಟಿಸಿತ್ತು. ತಕ್ಷಣ ಬಸ್​ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಬಸ್ ಚಾಲಕ ಸರಿಪಡಿಸಿದ್ದಾನೆ. ಘಟನೆಯಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv