ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ: ಕನ್ನಡ ಹೋರಾಟಗಾರರಿಂದ ತೀವ್ರ ವಿರೋಧ

ಬೆಳಗಾವಿ: ನಿನ್ನೆ ಮಂಡನೆಯಾದ ಬಜೆಟ್​​ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನ ವಿಭಜನೆ ಮಾಡುವುದಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ, ಎಚ್.ಡಿ. ಕುಮಾರಸ್ವಾಮಿಯವರ ಈ ನಿರ್ಧಾರಕ್ಕೆ ಬೆಳಗಾವಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡ ಪರ ಹೋರಾಟಗಾರರು ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ವಿಟಿಯು ಉಳಿಸಿ ಅಭಿಯಾನ ಕೂಡಾ ಆರಂಭ ಮಾಡಿದ್ದಾರೆ.

ವಿಟಿಯು ವಿಭಜನೆ ಮಾಡಿ, ಮತ್ತೊಂದು ಹಾಸನದಲ್ಲಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ವಿಟಿಯು ಒಂದೇ ಏಕೆ ರಾಜೀವ್​ ​ಗಾಂಧಿ ವಿವಿಯನ್ನು ವಿಭಜನೆ ಮಾಡಿ ಎಂದು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕನ್ನಡ ಪರ ಹೋರಾಟಗಾರರು ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv