ಕುಡುಗೋಲು ಹಿಡಿದು, ಗದ್ದೆಗಿಳಿದ ಪೇಜಾವರ ಕಿರಿಯ ಶ್ರೀ

ಉಡುಪಿ: ಗೋಪಾಲನೆ ಮತ್ತು ಪೋಷಣೆ ಬಗ್ಗೆ ನಿತ್ಯ ಹೋರಾಟ ನಡೆಸುವ ಪೇಜಾವರ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು, ಇಂದು ತಾವೇ ಸ್ವತಃ ಗೋವಿನ ಮೇವಿಗಾಗಿ ಗದ್ದೆಗಿಳಿದರು.
ಉಡುಪಿ ಜಿಲ್ಲೆಯ ಕುಂಜಾರುಗಿರಿಯ ಸುದರ್ಶನ್ ರಾವ್, ಕಳೆದ ಹಲವು ವರ್ಷಗಳಿಂದ ತಮ್ಮ ಗದ್ದೆಯಲ್ಲಿ ಜೋಳ ಬೆಳೆದು, ಅದನ್ನು ಉಚಿತವಾಗಿ ನೀಲಾವರ ಗೋಶಾಲೆಗೆ ನೀಡುತ್ತಿದ್ದಾರೆ.

ಇಂದು ಕುಂಟಾರು ಗಿರಿಯಲ್ಲಿ ತಮ್ಮ ಗೋಶಾಲೆಗೆ ಉಚಿತವಾಗಿ ಮೇವು ನೀಡುತ್ತಿರುವ ಸುದರ್ಶನ್ ಅವರ ಗದ್ದೆಗಿಳಿದ ಪೇಜಾವರ ಕಿರಿಯ ಸ್ವಾಮೀಜಿ, ಕೃಷಿಕರಂತೆ ಸ್ವತಃ ಕಟಾವು ನಡೆಸಿದರು. ಈ ಸಂದರ್ಭದಲ್ಲಿ ಕಾಪುನ ಮಾಜಿ ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಹಲವು ಜನ ಸ್ವಾಮೀಜಿಗೆ ಸಹಕಾರ ನೀಡಿದರು. ಕಟಾವಿನ ಸಂದರ್ಭದಲ್ಲಿ ನೆರೆಯ ಶಾಲೆಯ ವಿದ್ಯಾರ್ಥಿಗಳು ಊರವರು ಸಹಕರಿಸಿದರು.

Leave a Reply

Your email address will not be published. Required fields are marked *