ಧೋನಿ ಚಿತ್ರದಲ್ಲಿ ಹೇಳಿದ್ದ ಕಥೆ ಸುಳ್ಳಾ..?

ಮಹೇಂದ್ರ ಸಿಂಗ್ ಧೋನಿ ಆತ್ಮಕಥೆಯನ್ನಾಧರಿಸಿದ’ಎಂ.ಎಸ್‌.ಧೋನಿ ದಿ ಅನ್‌ಟೋಲ್ಡ್‌ ಸ್ಟೋರಿ’ ಚಿತ್ರ ಇಂದಿಗೂ ನೆನಪಿನಲ್ಲಿಡುವಂತಹ ಸಿನೆಮಾ. ಯಾಕಂದ್ರೆ ಈ ಸಿನೆಮಾ ಧೋನಿ ಜೀವನದಲ್ಲಿ ನಡೆದಂತಹ ಎಲ್ಲಾ ಘಟನಾವಳಿಗಳನ್ನ ಆಧರಿಸಿ ನಿರ್ಮಿಸಲಾಗಿದ್ದು, ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​​​​​ ಸಹ ಸಿಕ್ಕಿತ್ತು. ಅಷ್ಟೇ ಅಲ್ಲದೇ ಧೋನಿಯ ಫಿಲ್ಮ್ ಬಾಲಿವುಡ್​​ನಲ್ಲಿ ಧೂಳೆಬ್ಬಿಸಿತ್ತು. ಆದ್ರೆ ಈ ಚಿತ್ರದಲ್ಲಿನ ಒಂದು ಸೀನ್ ತಪ್ಪಾಗಿ ತೋರಿಸಲಾಗಿದೆಯಂತೆ.

ಧೋನಿ ಚಿತ್ರದ ನಿಜಾಂಶವನ್ನ ರಿವೀಲ್ ಮಾಡಿದ್ರು ವೀರೂ

ಹೌದು..’ವಾಟ್ ದಿ ಡಕ್’ ಅನ್ನೋ ಟಿವಿ ಶೋನಲ್ಲಿ ಟೀಮ್ ಇಂಡಿಯಾದ ಮಾಜಿ ಓಪನಿಂಗ್ ಡ್ಯಾಶರ್ ವೀರೇಂದ್ರ ಸೆಹ್ವಾಗ್, ಧೋನಿ ಚಿತ್ರದ ಒಂದು ಸೀನ್​​​​​ನ ನಿಜಾಂಶವನ್ನ ತೆರೆದಿಟ್ಟಿದ್ದಾರೆ. ಅದೇನಂದ್ರೆ 2011ರ ವಿಶ್ವಕಪ್​​​​ ಫೈನಲ್ಸ್​​​​ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೌತಮ್ ಗಂಭೀರ್​​​​​ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್​ ಮಾಡ್ತಿದ್ರು. ಒಂದು ವೇಳೆ ವಿರಾಟ್ ಕೊಹ್ಲಿ ಔಟ್ ಆದ್ರೆ ಧೋನಿ ಬ್ಯಾಟ್​​​​​​​ ಮಾಡಲಿ.​​ ಇನ್ನು ಗಂಭೀರ್ ಔಟ್ ಆದ್ರೆ ಯುವರಾಜ್ ಸಿಂಗ್​​​​​​​ ತೆರಳಲಿ​ ಅಂತ ಅಂದಿನ ಕೋಚ್ ಗ್ಯಾರಿ ಕರ್ಸ್ಟನ್​​​ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ರು. ಆದ್ರೆ, ಧೋನಿ ಚಿತ್ರದಲ್ಲಿ ಧೋನಿಯೇ ಗ್ಯಾರಿ ಕರ್ಸ್ಟನ್​​​ಗೆ ಹೇಳಿದ್ದು ಅಂತ ತೋರಿಸಲಾಗಿದೆ ಎಂದು ವೀರೂ ಹೇಳಿದ್ದಾರೆ.

​​​​​ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv